Sandalwood

Asha Bhosle Kannada Songs : ಕನ್ನಡ ಚಿತ್ರರಂಗದೊಂದಿಗೆ ಆಶಾ ಬೋಸ್ಲೆ ನಂಟು : 1967ರಿಂದ ಆರಂಭ!

ಭಾರತ ಸಿನಿರಂಗದ ದಂತಕಥೆ ಆಶಾ ಬೋಸ್ಲೆ ವಿಧಿವಶರಾಗಿದ್ದಾರೆ. ಇಂತಹ ಮಹಾನ್ ಸಾಧಕಿಗೆ ಕನ್ನಡ ಚಿತ್ರರಂಗದೊಂದಿಗೂ ಅಪೂರ್ವ ಸಂಬಂಧ ಇದೆ.

ಕನ್ನಡ ಸಿನಿಲೋಕಕ್ಕೆ ಆಶಾ ಬೋಸ್ಲೆ ಪದಾರ್ಪಣೆ ಮಾಡಿದ್ದು 1967ರಲ್ಲಿ. ಐತಿಹಾಸಿಕ ಚಲನಚಿತ್ರ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ `ಯಾಕೋ ಏನೋ…’ ಎಂಬ ಹಾಡನ್ನು ಹಾಡಿದ್ದರು. ಲಕ್ಷ್ಮಣ್ ಬೆರ್ಲೇಕರ್ ಈ ಹಾಡನ್ನು ಸಂಯೋಜಿಸಿದ್ದರು.

ಇದಾದ ಬಳಿಕ 1973ರಲ್ಲಿ ಡಾ. ರಾಜ್‍ಕುಮಾರ್ ಮತ್ತು ಭಾರತಿ ವಿಷ್ಣುವರ್ಧನ್ ನಟಿಸಿದ `ದೂರದ ಬೆಟ್ಟ’ ಚಿತ್ರದಲ್ಲೂ ಆಶಾ ಬೋಸ್ಲೆ ಹಾಡಿದ್ದರು. ಜಿ.ಕೆ.ವೆಂಕಟೇಶ್ ಸಂಗೀತ ಸಂಯೋಜನೆಯ `ಸವಾಲು ಹಾಕಿ ಸೋಲಿಸಿ ಎಲ್ಲಾರ…’ ಹಾಡಿಗೆ ಇವರು ಧ್ವನಿಯಾಗಿದ್ದರು.

ಇದಾದ ಬಳಿಕ ಆಶಾ ಕನ್ನಡ ಚಿತ್ರರಂಗಕ್ಕೆ ಮರಳಿದ್ದು 2010ರಲ್ಲಿ. ರಾಘವ ದ್ವಾರ್ಕಿ ನಿರ್ದೇಶಿಸಿದ ಮತ್ತು ಶ್ರೀನಗರ ಕಿಟ್ಟಿ ಅಭಿನಯದ `ಮತ್ತೆ ಮುಂಗಾರು’ ಚಿತ್ರದಲ್ಲಿ `ಹೇಳದೆ ಕಾರಣ ಹೋದೆಯಾ…’ ಹಾಡನ್ನು ಹಾಡಿದ್ದು ಆಶಾ ಬೋಸ್ಲೆ ಅವರೇ.

ಹೀಗೆ ಕನ್ನಡದಲ್ಲೂ ಆಶಾ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. 20ಕ್ಕೂ ಹೆಚ್ಚು ಭಾಷೆಗಳಲ್ಲಿ 20,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಕೀರ್ತಿ ಇವರದ್ದು…

Show More

Related Articles

Leave a Reply

Your email address will not be published. Required fields are marked *

Back to top button