Asha Bhosle Kannada Songs : ಕನ್ನಡ ಚಿತ್ರರಂಗದೊಂದಿಗೆ ಆಶಾ ಬೋಸ್ಲೆ ನಂಟು : 1967ರಿಂದ ಆರಂಭ!
ಭಾರತ ಸಿನಿರಂಗದ ದಂತಕಥೆ ಆಶಾ ಬೋಸ್ಲೆ ವಿಧಿವಶರಾಗಿದ್ದಾರೆ. ಇಂತಹ ಮಹಾನ್ ಸಾಧಕಿಗೆ ಕನ್ನಡ ಚಿತ್ರರಂಗದೊಂದಿಗೂ ಅಪೂರ್ವ ಸಂಬಂಧ ಇದೆ.
ಕನ್ನಡ ಸಿನಿಲೋಕಕ್ಕೆ ಆಶಾ ಬೋಸ್ಲೆ ಪದಾರ್ಪಣೆ ಮಾಡಿದ್ದು 1967ರಲ್ಲಿ. ಐತಿಹಾಸಿಕ ಚಲನಚಿತ್ರ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ `ಯಾಕೋ ಏನೋ…’ ಎಂಬ ಹಾಡನ್ನು ಹಾಡಿದ್ದರು. ಲಕ್ಷ್ಮಣ್ ಬೆರ್ಲೇಕರ್ ಈ ಹಾಡನ್ನು ಸಂಯೋಜಿಸಿದ್ದರು.
ಇದಾದ ಬಳಿಕ 1973ರಲ್ಲಿ ಡಾ. ರಾಜ್ಕುಮಾರ್ ಮತ್ತು ಭಾರತಿ ವಿಷ್ಣುವರ್ಧನ್ ನಟಿಸಿದ `ದೂರದ ಬೆಟ್ಟ’ ಚಿತ್ರದಲ್ಲೂ ಆಶಾ ಬೋಸ್ಲೆ ಹಾಡಿದ್ದರು. ಜಿ.ಕೆ.ವೆಂಕಟೇಶ್ ಸಂಗೀತ ಸಂಯೋಜನೆಯ `ಸವಾಲು ಹಾಕಿ ಸೋಲಿಸಿ ಎಲ್ಲಾರ…’ ಹಾಡಿಗೆ ಇವರು ಧ್ವನಿಯಾಗಿದ್ದರು.
ಇದಾದ ಬಳಿಕ ಆಶಾ ಕನ್ನಡ ಚಿತ್ರರಂಗಕ್ಕೆ ಮರಳಿದ್ದು 2010ರಲ್ಲಿ. ರಾಘವ ದ್ವಾರ್ಕಿ ನಿರ್ದೇಶಿಸಿದ ಮತ್ತು ಶ್ರೀನಗರ ಕಿಟ್ಟಿ ಅಭಿನಯದ `ಮತ್ತೆ ಮುಂಗಾರು’ ಚಿತ್ರದಲ್ಲಿ `ಹೇಳದೆ ಕಾರಣ ಹೋದೆಯಾ…’ ಹಾಡನ್ನು ಹಾಡಿದ್ದು ಆಶಾ ಬೋಸ್ಲೆ ಅವರೇ.
ಹೀಗೆ ಕನ್ನಡದಲ್ಲೂ ಆಶಾ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. 20ಕ್ಕೂ ಹೆಚ್ಚು ಭಾಷೆಗಳಲ್ಲಿ 20,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಕೀರ್ತಿ ಇವರದ್ದು…



