ಸತ್ಯ ಜ್ಯೋತಿ ಫಿಲ್ಮ್ಸ್ ನ ಪ್ರಾಜೆಕ್ಟ್ ನಲ್ಲಿ ಶಿವರಾಜ್ ಕುಮಾರ್ : ಶೀಘ್ರದಲ್ಲೇ ಶೂಟಿಂಗ್ ಶುರು
ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆಯಾದ ಸತ್ಯ ಜ್ಯೋತಿ ಫಿಲ್ಮ್ಸ್ ನ ಮುಂದಿನ ಪ್ರಾಜೆಕ್ಟ್ ನಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆ ಪೋಸ್ಟ್ ಹಾಕಿರುವ ಸತ್ಯ ಜ್ಯೋತಿ ಫಿಲ್ಮ್ಸ್ `ಈ ವಿಶೇಷ ದಿನದಂದು, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರೊಂದಿಗೆ ನಮ್ಮ ಮುಂದಿನ ಚಿತ್ರವನ್ನು ಘೋಷಿಸಲು ನಾವು ಉತ್ಸುಕರಾಗಿದ್ದೇವೆ’ ಎಂದು ಬರೆದುಕೊಂಡಿದೆ.
1986ರಲ್ಲಿ ವಿಷ್ಣುವರ್ಧನ್ ಅವರ ಸತ್ಯಜ್ಯೋತಿ ಚಿತ್ರವನ್ನು ಬೆಂಬಲಿಸಿದ್ದ ನಂತರ 2025ರಲ್ಲಿ ಕಿಚ್ಚ ಸುದೀಪ್ ಅಭಿನಯದ `ಮಾರ್ಕ್’ ಚಿತ್ರದೊಂದಿಗೆ ಈ ನಿರ್ಮಾಣ ಸಂಸ್ಥೆ ಸಹಕರಿಸಿತ್ತು. ಇದೀಗ ಶಿವರಾಜ್ ಕುಮಾರ್ ಅವರೊಂದಿಗೆ ಹೊಸ ಪ್ರಾಜೆಕ್ಟ್ ಅನ್ನು ಘೋಷಿಸಿರುವ ಈ ಸಂಸ್ಥೆ ವಿಂಟೇಜ್ ಶೈಲಿಯ ದೊಡ್ಡ ಲೋಹದ ಕೀಲಿ ಹಾಗೂ ಅದರ ಸುತ್ತ ಚದುರಿರುವ ಬುಲೆಟ್‍ನ ಫೋಟೋವನ್ನು ಹಂಚಿಕೊಂಡಿದೆ.
On this special day, we are excited to announce our next with Karunada Chakaravarthy @NimmaShivanna and director @Saravanan16713.
An exciting project of ours. Shoot starts soon!@SathyaJyothi @arjun1on @saisiddharth_ @teamaimpr pic.twitter.com/TO2lO4fL5d
— Sathya Jyothi Films (@SathyaJyothi) April 14, 2026
ಎಂ ಸರವಣನ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಕನ್ನಡದಲ್ಲಿ ಇದು ಇವರ ಎರಡನೇ ಚಿತ್ರ. ಈ ಹಿಂದೆ ತಮಿಳಿನ `ಇವಾನ್ ವೇರಾಮತಿರಿ’ ಚಿತ್ರವನ್ನು ಕನ್ನಡದಲ್ಲಿ ಚಕ್ರವ್ಯೂಹ ಎಂಬ ಹೆಸರಿನಲ್ಲಿ ಇವರು ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ದಿವಂಗತ ಪುನೀತ್ ರಾಜ್‍ಕುಮಾರ್, ರಚಿತಾ ರಾಮ್ ನಟಿಸಿದ್ದರು.



