Bollywood

ಆಶಾ ಭೋಸ್ಲೆ ನಿಧನಕ್ಕೆ ನಟ ಜಾನ್ ಸೀನಾ, ಕ್ರಿಕೆಟಿಗ ಬ್ರೆಟ್ ಲೀ ಸಂತಾಪ

ಭಾರತ ಚಿತ್ರರಂಗದ ಅಪ್ರತಿಮ ಗಾಯಕಿ ಆಶಾ ಭೋಸ್ಲೆ ಏಪ್ರಿಲ್ 12ರ ಭಾನುವಾರ ಅಗಲಿದ್ದಾರೆ. ಗಾಯನ ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆಯ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋದ ಈ ಮೇರು ಗಾಯಕಿಯ ಅಗಲಿಕೆಗೆ ಹಲವರು ಕಂಬನಿ ಮಿಡಿಸಿದ್ದಾರೆ. ಅಂತಾರಾಷ್ಟ್ರೀಯ ತಾರೆಗಳೂ ಆಶಾ ಭೋಸ್ಲೆ ಅವರೊಂದಿಗೆ ಇದ್ದ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.

ನಟ ಜಾನ್ ಸೀನಾ, ಕ್ರಿಕೆಟಿಗ ಬ್ರೆಟ್ ಲೀ ಆಶಾ ಭೋಸ್ಲೆ ಅವರ ಫೋಟೋ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.


ನಟ ಜಾನ್ ಸೀನಾ ಅವರು ಇನ್‍ಸ್ಟಾಗ್ರಾಂನಲ್ಲಿ ಆಶಾ ಭೋಸ್ಲೆ ಫೋಟೋ ಹಂಚಿಕೊಂಡಿದ್ದರೆ, ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ತಮ್ಮ ಇನ್‍ಸ್ಟಾಗ್ರಾಂ ಪೋಸ್ಟ್‍ನಲ್ಲಿ ಆಶಾ ಭೋಸ್ಲೆ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.


`2006 ರಲ್ಲಿ ಆಶಾ ಭೋಸ್ಲೆ ಅವರೊಂದಿಗೆ “ಯು ಆರ್ ದಿ ಒನ್ ಫಾರ್ ಮಿ” ಬರೆದು ರೆಕಾರ್ಡ್ ಮಾಡುವ ಸಂತೋಷ ನನಗೆ ಸಿಕ್ಕಿತು. ಅದಕ್ಕಾಗಿ ನಾನು ಯಾವಾಗಲೂ ನಂಬಲಾಗದಷ್ಟು ಕೃತಜ್ಞನಾಗಿರುತ್ತೇನೆ. ನನ್ನೊಂದಿಗೆ ಉಳಿದದ್ದು ಅವರ ಅಸಾಧಾರಣ ಪ್ರತಿಭೆ ಮಾತ್ರವಲ್ಲ, ಅವರು ಎಷ್ಟು ದಯೆ ಮತ್ತು ವಿನಮ್ರರಾಗಿದ್ದರು ಎಂಬುದು. ತನ್ನ ಜೀವನದಲ್ಲಿ ತುಂಬಾ ಸಾಧನೆ ಮಾಡಿದ್ದ ಅವರು ಮೃದು ಹಾಗೂ ಔದಾರ್ಯ ಸ್ವಭಾವ ಹೊಂದಿದ್ದರು. ಈ ಸಮಯದಲ್ಲಿ ನನ್ನ ಪ್ರಾರ್ಥನೆಗಳು ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ಇವೆ. ಅಂತಹ ವಿಶೇಷ ವ್ಯಕ್ತಿಯೊಂದಿಗೆ ಒಂದು ಸಣ್ಣ ಕ್ಷಣವನ್ನು ಸಹ ಹಂಚಿಕೊಂಡಿದ್ದಕ್ಕಾಗಿ ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ’ ಎಂದು ಬ್ರೆಟ್ ಲೀ ಬರೆದುಕೊಂಡಿದ್ದಾರೆ.

ಭಾನುವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಆಶಾ ಭೋಸ್ಲೆ ಕೊನೆಯುಸಿರೆಳೆದಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button