ಜಪಾನ್ನಲ್ಲಿ ಧುರಂಧರ್ : ಜುಲೈ 10 ರಂದು ಬಿಡುಗಡೆ
ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ಅಭಿನಯದ ಸೂಪರ್ ಹಿಟ್ ಧುರಂಧರ್ (ಭಾಗ 1) ಸಿನಿಮಾ ಈಗ ಜಪಾನ್ನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಜುಲೈ 10 ರಂದು ಜಪಾನ್ನಲ್ಲಿ ಈ ಸ್ಪೈ ಥ್ರಿಲ್ಲರ್ ಸಿನಿಮಾ ಬಿಡುಗಡೆಯಾಗುತ್ತಿದೆ.
ಚಿತ್ರದ ತಯಾರಕರು ಈ ಚಿತ್ರದ ಪೋಸ್ಟರ್ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಬಿಡುಗಡೆ ಮಾಡಿದ್ದಾರೆ. “ಜಪಾನ್ ಧುರಂಧರ್ ಶಕ್ತಿಯನ್ನು ಅನುಭವಿಸುವ ಸಮಯ! 10.7.2026 ರಂದು ಜಪಾನ್ನಾದ್ಯಂತ ಚಿತ್ರಮಂದಿರಗಳಿಗೆ ಆಗಮಿಸುತ್ತಿದೆ” ಎಂಬ ಶೀರ್ಷಿಕೆಯೊಂದಿಗೆ ಈ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ.
ಈ ಸ್ಪೈ ಆಕ್ಷನ್ ಎಂಟರ್ಟೈನರ್ನ ಮೊದಲ ಭಾಗವು 2025ರ ಡಿಸೆಂಬರ್ 5 ರಂದು ಬಿಡುಗಡೆಯಾಗಿತ್ತು. ಈ ಸಿನಿಮಾ ಜಾಗತಿಕವಾಗಿ 1307.35 ಕೋಟಿ ರೂಪಾಯಿಗಳನ್ನು ಗಳಿಸಿತು.
ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್. ಮಾಧವನ್, ಸಾರಾ ಅರ್ಜುನ್, ರಾಕೇಶ್ ಬೇಡಿ, ಗೌರವ್ ಗೆರಾ ಮತ್ತು ಡ್ಯಾನಿಶ್ ಪಾಂಡೋರ್ ನಟಿಸಿರುವ ಧುರಂಧರ್ ಚಿತ್ರವನ್ನು ಎರಡು ಭಾಗಗಳ ಚಿತ್ರವಾಗಿ ಚಿತ್ರೀಕರಿಸಲಾಗಿತ್ತು. ‘ಧುರಂಧರ್: ದಿ ರಿವೆಂಜ್’ ಕೂಡಾ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿದೆ.



