Sandalwood
ಗಣೇಶ್ ಪತ್ನಿ ಶಿಲ್ಪಾ ಬರೀ ನಿರ್ಮಾಪಕಿ ಮಾತ್ರ ಅಲ್ಲ, ಗಾಯಕಿಯೂ ಹೌದು
ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಗಾಯಕಿಯಾಗಿಯೂ ಗಮನ ಸೆಳೆದಿದ್ದಾರೆ. ಸದ್ಯ ತಮ್ಮ ಗೋಲ್ಡನ್ ಮೂವೀಸ್ ಬ್ಯಾನರ್ ಅಡಿಯಲ್ಲಿ `ಪಿಕ್ಚರ್’ ಎಂಬ ಚಿತ್ರವನ್ನು ಇವರು ನಿರ್ಮಿಸುತ್ತಿದ್ದಾರೆ. ಸಂದೀಪ್ ಬೆದ್ರಾ ನಿರ್ದೇಶನದ ಮತ್ತು ನಿತ್ಯಪ್ರಕಾಶ್ ಬಂಟ್ವಾಳ್ ನಟಿಸಿರುವ ಈ ಸಿನಿಮಾ ಕನ್ನಡ ಹಾಗೂ ತುಳು ಭಾಷೆಯಲ್ಲಿ ಬರುತ್ತಿದೆ. ಇದು ಕೌಟುಂಬಿಕ ಮನೋರಂಜನಾ ಚಿತ್ರವಾಗಿದೆ.
View this post on Instagram
ಇದೇ ಚಿತ್ರದಲ್ಲಿ ಶಿಲ್ಪಾ ಗಣೇಶ್ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಕನ್ನಡ ಹಾಗೂ ತುಳು ಎರಡರಲ್ಲೂ ಹಾಡುವ ಮೂಲಕ ಇವರು ಗಾಯನ ಲೋಕಕ್ಕೂ ಕಾಲಿಟ್ಟಿದ್ದಾರೆ. ಕೃಷ್ಣಂ ಪ್ರಯಾಣ ಸಖಿ ಚಿತ್ರದ ‘ದ್ವಾಪರ’ ಹಾಡಿನ ಮೂಲಕ ಗಮನ ಸೆಳೆದಿದ್ದ ಗಾಯಕ ಜಸ್ಕರನ್ ಸಿಂಗ್ ಅವರೊಂದಿಗೆ ಶಿಲ್ಪಾ `ಗೋಕುಲದ ರಾಧೆ’ ಹಾಡನ್ನು ಹಾಡಿದ್ದಾರೆ. ಅರಸು ಕನ್ನಡದ ಸಾಹಿತ್ಯ ಬರೆದಿದ್ದರೆ, ಕೀರ್ತನ್ ಭಂಡಾರಿ ತುಳು ಆವೃತ್ತಿಯನ್ನು ಬರೆದಿದ್ದಾರೆ.
ಸ್ಯಾಮ್ಯುಯೆಲ್ ಅಬಿ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.



