Sandalwood
ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟ `ಸು ಫ್ರಮ್ ಸೋ’ ಜೆ ಪಿ ತುಮಿನಾಡ್
ಸು ಫ್ರಮ್ ಸೋ ಚಿತ್ರದ ಮೂಲಕ ಜನಮನ ಗೆದ್ದ ನಟ, ನಿರ್ದೇಶಕ ಜೆ ಪಿ ತುಮಿನಾಡ್ ಈಗ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ವಾಝಾ ಚಿತ್ರದ ನಿರ್ದೇಶಕ ಆನಂದ್ ಮೆನೆನ್ ಅವರ ಹ್ಯಾಪಿಲೂಪ್ ಚಿತ್ರದಲ್ಲಿ ಜೆಪಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಮಂಜು ವಾರಿಯರ್, ಮುಖೇಶ್ ಸೇರಿ ಹಲವರು ನಟಿಸಲಿದ್ದಾರೆ.
ಜೆ ಪಿ ತುಮಿನಾಡ್ ಶೀಘ್ರದಲ್ಲೇ ಹ್ಯಾಪಿಲೂಪ್ನ ಸೆಟ್ಗೆ ಸೇರುವ ನಿರೀಕ್ಷೆಯಿದೆ. ಬಿನಿಶ್ ಚಂದ್ರ ಅವರ ಮೂವಿ ಬಕೆಟ್ ಬ್ಯಾನರ್ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.
ಜೆ ಪಿ ತುಮಿನಾಡ್ ನಟನೆ, ನಿರ್ದೇಶನದ ಸು ಫ್ರಮ್ ಸೋ ಚಿತ್ರವು ಕೇರಳದಲ್ಲೂ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಇತ್ತೀಚೆಗಷ್ಟೇ ದಾಂಪತ್ಯಕ್ಕೆ ಕಾಲಿಟ್ಟಿರುವ ಜೆ ಪಿ ತುಮಿನಾಡ್, ಬಣ್ಣದ ಲೋಕದಲ್ಲಿ ವಿವಿಧ ಪ್ರಾಜೆಕ್ಟ್ಗಳೊಂದಿಗೆ ಮುನ್ನಡೆಯುತ್ತಿದ್ದಾರೆ.



