32 ವರ್ಷಗಳ ಹಿಂದಿನ ಬ್ಲಾಕ್ ಬಸ್ಟರ್ ಸಿನಿಮಾ ಶೂಟ್ ಆದ ಸ್ಥಳಕ್ಕೆ ಭೇಟಿ ನೀಡಿದ ಅನುಪಮ್ ಖೇರ್ : ಸರ್ಕಾರಕ್ಕೂ ವಿಶೇಷ ಮನವಿ
`ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ಭಾರತ ಸಿನಿಮಾ ರಂಗದ ಪ್ರಮುಖ ಚಿತ್ರಗಳಲ್ಲಿ ಒಂದು. ಶಾರೂಖ್ ಖಾನ್ ಹಾಗೂ ಕಾಜೋಲ್ ಅಭಿನಯದ ಈ ಸಿನಿಮಾವನ್ನು ಸಿನಿಪ್ರಿಯರು ಮರೆಯಲು ಸಾಧ್ಯವೇ ಇಲ್ಲ. ಈ ಸಿನಿಮಾದ ಕ್ಲೈಮ್ಯಾಕ್ಸ್‌ನ ದೃಶ್ಯವಂತೂ ಸೂಪರ್. ಅದೇ ರೈಲ್ವೇ ನಿಲ್ದಾಣದಲ್ಲಿ ನಿಧಾನವಾಗಿ ಸಾಗುತ್ತಿದ್ದ ಟ್ರೈನ್‌ನತ್ತ ಓಡಿ ಹೀರೋ ಕೈ ಹಿಡಿಯುವ ಹೀರೋಯಿನ್ ದೃಶ್ಯ. ಟ್ರೈನ್‌ನಲ್ಲಿದ್ದ ಶಾರೂಖ್‌ರತ್ತ ನಟಿ ಕಾಜೋಲ್ ಓಡುವ ದೃಶ್ಯ ಅಂದು ಪ್ರೇಕ್ಷಕರನ್ನು ಥಿಯೇಟರ್ ಸೀಟಿನ ಮುಂದೆ ಬಂದು ಕುಳಿತು ನೋಡುವಂತೆ ಮಾಡಿತ್ತು… ಜೊತೆಗೆ ಹಿತವಾದ ಹಿನ್ನೆಲೆ ಸಂಗೀತವೂ ಈ ಸನ್ನಿವೇಶವನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ದಿತ್ತು..
ಈ ದೃಶ್ಯ ನಂತರ ಸಾಕಷ್ಟು ಸಿನಿಮಾಗಳ ದೃಶ್ಯಗಳಿಗೂ ಸ್ಫೂರ್ತಿಯಾಗಿತ್ತು. ಈ ಕ್ಲಾಸಿಕ್ ದೃಶ್ಯ ಚಿತ್ರೀಕರಣಗೊಂಡಿದ್ದು, ಮಹಾರಾಷ್ಟ್ರದ ಆಪ್ತಾ ಸ್ಟೇಷನ್ ನಿಲ್ದಾಣದಲ್ಲಿ.
ಇದೀಗ ಈ ಐಕಾನಿಕ್ ದೃಶ್ಯ ಚಿತ್ರೀಕರಣಗೊಂಡಿದ್ದ ರೈಲ್ವೇ ನಿಲ್ದಾಣಕ್ಕೆ ನಟ ಅನುಪಮ್ ಖೇರ್ ಭೇಟಿ ನೀಡಿ ಅಂದಿನ ಸನ್ನಿವೇಶವನ್ನು ವಿವರಿಸಿದ್ದಾರೆ. ಈ ಸಿನಿಮಾದಲ್ಲಿ ಅನುಪಮ್ ಖೇರ್ ನಾಯಕ ನಟ ಶಾರೂಖ್ ತಂದೆಯಾಗಿಯೂ ನಟಿಸಿದ್ದರು.
ತಮ್ಮ ಈ ಭೇಟಿಯ ವಿಡಿಯೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಅನುಪಮ್ ಖೇರ್ ಅವರು, ಈ ರೈಲ್ವೇ ನಿಲ್ದಾಣವನ್ನು ಪ್ರವಾಸಿ ತಾಣವಾಗಿ ಮಾಡಬೇಕು ಎಂದೂ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
View this post on Instagram
1995ರಲ್ಲಿ ಆದಿತ್ಯ ಚೋಪ್ರಾ `ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ಚಿತ್ರವನ್ನು ನಿರ್ದೇಶನ ಮಾಡಿದ್ದರು.



