Sandalwood

`ಮಾಂಗೋ ಪಚ್ಚ’ ಚಿತ್ರದ ಟ್ರೇಲರ್ ರಿಲೀಸ್

ಮುಂಬರುವರ ಕನ್ನಡದ `ಮಾಂಗೋ ಪಚ್ಚ’ ಚಿತ್ರದ ಟ್ರೇಲರ್ ಅನ್ನು ಮೈಸೂರಿನ ಸಂಗಮ್ ಥಿಯೇಟರ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಕಿಚ್ಚ ಸುದೀಪ್ ಸಂಬAಧಿ ಸಂಚಿತ್ ಸಂಜೀವ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಇದು ಇವರ ಮೊದಲ ಸಿನಿಮಾವಾಗಿದೆ. ವಿವೇಕ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಮೈಸೂರು ಪೊಲೀಸರು ೫೦೦ ಕೆಜಿ ಗಾಂಜಾವನ್ನು ಒಳಗೊಂಡ ಪ್ರಮುಖ ಮಾದಕವಸ್ತು ವಶಪಡಿಸಿಕೊಂಡ ಬಗ್ಗೆ ಸುದ್ದಿ ವರದಿಗಳೊಂದಿಗೆ ಟ್ರೇಲರ್ ಪ್ರಾರಂಭವಾಗುತ್ತದೆ. ನಂತರ ಸಂಚಿತ್ ಸಂಜೀವ್ ನಿರ್ವಹಿಸಿದ ಪ್ರಶಾಂತ್ ಎಂದೂ ಕರೆಯಲ್ಪಡುವ ಮ್ಯಾಂಗೋ ಪಚ್ಚ ಅವರ ಪಾತ್ರದ ಪರಿಚಯವನ್ನು ಇಲ್ಲಿ ಮಾಡಲಾಗುತ್ತದೆ.

ಚಿತ್ರದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಮಯೂರ್ ಪಟೇಲ್, ಭಾವನಾ, ಪ್ರಶಾಂತ್ ಹಿರೇಮಠ, ಹರಿಣಿ ಶ್ರೀಕಾಂತ್, ಹಂಸಾ ನಾರಾಯಣಸ್ವಾಮಿ ಮತ್ತು ಉಗ್ರಂ ಮಂಜು ಸೇರಿ ಹಲವರು ನಟಿಸಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ಜೂನ್ 5ಕ್ಕೆ ಈ ಸಿನಿಮಾ ಥಿಯೇಟರ್‍ನಲ್ಲಿ ಬಿಡುಗಡೆಯಾಗಲಿದೆ.

Show More

Related Articles

Leave a Reply

Your email address will not be published. Required fields are marked *

Back to top button