Bollywood

ರಾಮ್‍ಗೋಪಾಲ್ ವರ್ಮಾ ಮತ್ತು ಊರ್ಮಿಳಾ ಮಾತೋಡ್ಕರ್ ರಹಸ್ಯವಾಗಿ ವಿವಾಹವಾಗಿದ್ದರಾ? : ಹಳೆಯ ಸುದ್ದಿ ಮತ್ತೆ ಮುನ್ನೆಲೆಗೆ ಬರಲು ಕಾರಣವೇನು?

ಅದು 1990ರ ದಶಕ. ಬಾಲಿವುಡ್‍ನಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ದೊಡ್ಡ ಹೆಸರು ಮಾಡಿದ್ದರು. ನಟಿ ಊರ್ಮಿಳಾ ಮಾತೋಡ್ಕರ್ ಕೂಡಾ ಬೇಡಿಕೆಯ ನಟಿಯಾಗಿದ್ದರು. ಈ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಎಂಬ ಸುದ್ದಿ ಹರಡಿತ್ತು. ಆದರೆ, ಇವರಿಬ್ಬರು ದೇಗುಲವೊಂದರಲ್ಲಿ ರಹಸ್ಯವಾಗಿ ಮದುವೆ ಕೂಡಾ ಆಗಿದ್ದರಂತೆ…! ಅಂದಿನ ಈ ಸುದ್ದಿ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

ಹಿರಿಯ ಸಿನಿಮಾ ಪತ್ರಕರ್ತ ಜ್ಯೋತಿ ವೆಂಕಟೇಶ್, ರಾಮ್ ಗೋಪಾಲ್ ವರ್ಮಾ ಹಾಗೂ ಊರ್ಮಿಳಾ ಗುಟ್ಟಾಗಿ ವಿವಾಹವಾಗಿದ್ದರು ಎಂಬ ಸುದ್ದಿ ಇತ್ತು. ಇದನ್ನು ನಾನು ಅಂದು ಬರೆದಿದ್ದೆ ಎಂದು ಹೇಳಿಕೊಂಡಿದ್ದಾರೆ. ಸಿದ್ಧಾರ್ಥ್ ಕಣ್ಣನ್ ಅವರ ಯುಟ್ಯೂಬ್ ಚಾನೆಲ್‍ನಲ್ಲಿ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜ್ಯೋತಿ ವೆಂಕಟೇಶ್ ಅಂದಿನ ಘಟನೆಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.

 

View this post on Instagram

 

A post shared by Siddharth R Kannan (@sid_kannan)


`ನಾನು ಊಟಿಗೆ ಹೋಗಿದ್ದೆ. ಆಗ ಜಂಟಲ್‍ಮ್ಯಾನ್ ಚಿತ್ರದ ಶೂಟಿಂಗ್ ಸೆಟ್‍ನಲ್ಲಿ ಚಿರಂಜೀವಿ ಅವರನ್ನು ಭೇಟಿಯಾದಾಗ ಅವರು, ಜ್ಯೋತಿ, ಪತ್ರಕರ್ತನಾಗಿ, ನೀವು ಎಲ್ಲದರ ಬಗ್ಗೆ ಬರೆಯುತ್ತೀರಿ. ಹಾಗಾದರೆ ನೀವು ರಾಮ್ ಗೋಪಾಲ್ ವರ್ಮಾ ಮತ್ತು ಊರ್ಮಿಳಾ ಅವರ ವಿವಾಹದ ಬಗ್ಗೆ ಏಕೆ ಬರೆಯಲಿಲ್ಲ? ಎಂದು ಕೇಳಿದರು. ಈ ಬಗ್ಗೆ ನಾನು ಅನುಮಾನ ವ್ಯಕ್ತಪಡಿಸಿದಾಗ ಪುರಾವೆಯಾಗಿ ಆಂಧ್ರಪ್ರದೇಶದ ದೇವಸ್ಥಾನವೊಂದರಲ್ಲಿ ಇವರಿಬ್ಬರಿಗೆ ವಿವಾಹ ಮಾಡಿಸಿದ ಪುರೋಹಿತರ ಫೋನ್ ಸಂಖ್ಯೆಯನ್ನೂ ನೀಡಿ ಇವರಿಂದ ದೃಢಪಡಿಸಿಕೊಳ್ಳುವಂತೆ ಹೇಳಿದರು. ಈ ವರದಿಯನ್ನು ನಾನು ಪ್ರಕಟಿಸಿದೆ. ಆದರೆ ವರದಿ ಪ್ರಕಟಿಸುವ ಮುನ್ನ ಈ ಸಂಗತಿಯನ್ನು ದೃಢೀಕರಿಸಲು ಊರ್ಮಿಳಾ ಅವರಿಗೆ ಕರೆ ಮಾಡಿದೆ. ಅವರು ಅಳುತ್ತಾ, `ನನ್ನ ಬಗ್ಗೆ ನೀವು ಹೀಗೆ ಬರೆಯಲು ಹೇಗೆ ಸಾಧ್ಯ? ನಾನು ಉದ್ಯಮಕ್ಕೆ ಬಂದಾಗಿನಿಂದ ನೀವು ನನ್ನನ್ನು ಬಲ್ಲಿರಿ’ ಎಂದು ಹೇಳಿದರು. ರಾಮ್‍ಗೋಪಾಲ್ ವರ್ಮಾ ಅವರಿಗೆ ಕರೆ ಮಾಡಿದಾಗ ಅವರು ಈ ಬಗ್ಗೆ ಮಾತನಾಡುವುದಕ್ಕೆ ನಿರಾಕರಿಸಿದರು. ಎರಡೂ ಕಡೆಯವರ ಅಭಿಪ್ರಾಯಗಳನ್ನು ಉಲ್ಲೇಖಿಸಿಯೇ ನಾನು ಅಂದು ಈ ವರದಿ ಮಾಡಿದ್ದೆ’ ಎಂದು ಜ್ಯೋತಿ ವೆಂಕಟೇಶ್ ಹೇಳಿಕೊಂಡಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜ್ಯೋತಿ ವೆಂಕಟೇಶ್, ಊರ್ಮಿಳಾ ರಾಮ್‍ಗೋಪಾಲ್ ವರ್ಮಾ ಜೊತೆಗಿನ ತಮ್ಮ ವಿವಾಹವನ್ನು ಕಾನೂನುಬದ್ಧವಾಗಿ ಗುರುತಿಸಬೇಕೆಂದು ಬಯಸಿದ್ದರು. ಆದರೆ ರಾಮ್‍ಗೋಪಾಲ್ ವರ್ಮಾ ಇದಕ್ಕೆ ಒಪ್ಪದೇ ಇದ್ದಾಗ ಈ ಸಂಬಂಧ ಮುರಿದು ಬಿದ್ದಿರಲೂಬಹುದು ಎಂದು ಹೇಳಿಕೊಂಡಿದ್ದಾರೆ.

ಆದರೆ ಜ್ಯೋತಿ ವೆಂಕಟೇಶ್ ಅವರ ಈ ಹೇಳಿಕೆಯನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಿಲ್ಲ ಹಾಗೂ ರಾಮ್ ಗೋಪಾಲ್ ವರ್ಮಾ ಅಥವಾ ಊರ್ಮಿಳಾ ಮಾತೋಂಡ್ಕರ್ ಅವರು ಅಂತಹ ಮದುವೆ ನಡೆದಿರುವುದನ್ನು ಸಾರ್ವಜನಿಕವಾಗಿ ದೃಢಪಡಿಸಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ಇಲ್ಲಿ ನಾವು ಜ್ಯೋತಿ ವೆಂಕಟೇಶ್ ಅವರ ಅಭಿಪ್ರಾಯವನ್ನಷ್ಟೇ ಪ್ರಕಟಿಸಿದ್ದೇವೆ.

ಇನ್ನು ಬಾಲಿವುಡ್‍ನಲ್ಲಿ ಊರ್ಮಿಳಾ ಮಾತೋಂಡ್ಕರ್ ಮತ್ತು ರಾಮ್ ಗೋಪಾಲ್ ವರ್ಮಾ ಹಲವು ಪ್ರಾಜೆಕ್ಟ್ ಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ರಂಗೀಲಾ, ದೌಡ್, ಸತ್ಯ, ಕೌನ್?, ಮಸ್ತ್, ಪ್ಯಾರ್ ತುನೇ ಕ್ಯಾ ಕಿಯಾ ಮತ್ತು ಭೂತ್ ನಂತಹ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು.

Show More

Related Articles

Leave a Reply

Your email address will not be published. Required fields are marked *

Back to top button