Bollywood
ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ಹುಮಾ ಖುರೇಷಿ ಮತ್ತು ರಚಿತ್ ಸಿಂಗ್
ಬಾಲಿವುಡ್ ನಟಿ ಹುಮಾ ಖುರೇಷಿ ಹಾಗೂ ಆಕ್ಟಿಂಗ್ ಕೋಚ್ ರಚಿತ್ ಸಿಂಗ್ ತಮ್ಮ ಪ್ರೀತಿಗೆ ವಿವಾಹದ ಮುದ್ರೆ ಒತ್ತಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸದ್ಯ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ಈ ವರ್ಷದ ಅಕ್ಟೋಬರ್ ಅಂತ್ಯದಲ್ಲಿ ಅಥವಾ ನವೆಂಬರ್ ಆರಂಭದಲ್ಲಿ ಈ ಜೋಡಿ ದಾಂಪತ್ಯಕ್ಕೆ ಕಾಲಿಡಲಿದೆ.
ಈ ಇಬ್ಬರು ಮುಂಬೈಯಲ್ಲಿ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಲು ನಿರ್ಧರಿಸಿದ್ದಾರೆ ಎಂದೂ ಹೇಳಲಾಗಿದ್ದು, ವಿವಾಹದ ಬಳಿಕ ಗಣ್ಯರಿಗೆ ದೊಡ್ಡ ಔತಣಕೂಟ ಆಯೋಜಿಸಲು ಯೋಜಿಸಲಾಗಿದೆ ಎನ್ನಲಾಗುತ್ತದೆ.
ಈ ಹಿಂದೆ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ವಿವಾಹಕ್ಕೆ ಇವರಿಬ್ಬರು ಜೊತೆಯಾಗಿ ಬರುವ ಮೂಲಕ ಡೇಟಿಂಗ್ ವದಂತಿಗೆ ಇನ್ನಷ್ಟು ಪುಷ್ಟಿ ನೀಡಿದ್ದರು.



