ಅವರನ್ನು ಮತ್ತೆ ನೋಡದೆ ನನ್ನ ಆತ್ಮಕ್ಕೆ ಶಾಂತಿ ಇಲ್ಲ : ದಿಲೀಪ್ ಪತ್ನಿ ಭಾವುಕ ಪೋಸ್ಟ್
ನಟ, ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನ ಎಲ್ಲರಲ್ಲೂ ಆಘಾತ ಮೂಡಿಸಿದೆ. ಮೇ 12 ರಂದು ಇವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ದಿಲೀಪ್ ಅಗಲಿಗೆ ಹಲವು ಕಂಬನಿ ಮಿಡಿದಿದ್ದಾರೆ.
ಇನ್ನು ಪತಿಯ ಅಗಲಿಕೆಯ ಬಳಿಕ ಪತ್ನಿ ಶ್ರೀವಿದ್ಯಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವುಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
‘ಜೀವನದ ಕಹಿ ಘಟನೆ ಸಂದರ್ಭದಲ್ಲಿ ನನ್ನ ಜೊತೆ ಇರುವ ಪ್ರತಿಯೊಬ್ಬರಿಗೂ ಕೃತಜ್ಞತೆ ತಿಳಿಸುತ್ತಿದ್ದೇನೆ. ಕಲೆ, ಸಿನಿಮಾ ಮತ್ತು ನಾವು ಇಲ್ಲಿ ಅನುಭವಿಸುವ ಯಾವುದೇ ದಯೆಯ ರೂಪದಲ್ಲಿ ದಿಲೀಪ್ ಸದಾ ನಮ್ಮ ನಡುವೆ ಇರುತ್ತಾರೆ. ಅವರನ್ನು ಶಾಂತಿಯಿಂದ ಇರಲು ಹಾಗೂ ಹೊಸ ಜೀವನವನ್ನು ಕಂಡುಕೊಳ್ಳಲು ಬಿಡಬೇಕು ಎಂದು ನಾನು ನಿರ್ಧರಿಸಿದ್ದೇನೆ. ಆದರೆ ಒಂದು ವಿಷಯವಂತು ಸತ್ಯ- ಅವರನ್ನು ಮತ್ತೆ ನೋಡುವ ತನಕ ನನ್ನ ಆತ್ಮಕ್ಕೂ ಶಾಂತಿ ಸಿಗುವುದಿಲ್ಲ’ ಎಂದು ಇವರು ಬರೆದುಕೊಂಡಿದ್ದಾರೆ.
ದಿಲೀಪ್ ಅವರು ಪತ್ನಿ ಶ್ರೀವಿದ್ಯಾ ಜೊತೆ ತಮ್ಮದೇ ನಿರ್ಮಾಣ ಸಂಸ್ಥೆಯಡಿಯಲ್ಲಿ ಹಿಟ್ಲರ್ ಕಲ್ಯಾಣ, ಪಾರು, ವಿದ್ಯಾ ವಿನಾಯಕ ಸೇರಿ ಹಲವು ಧಾರಾವಾಹಿಗಳನ್ನು ನಿರ್ಮಿಸಿದ್ದರು.



