Special Desk

ನಿಮ್ಮ ದಿನವನ್ನು ಸರಿಯಾಗಿ ಆರಂಭಿಸಲು ಪರಶಿವನಿಂದ ಪ್ರೇರಿತವಾದ ಬೆಳಗಿನ ಅಭ್ಯಾಸಗಳು

ಬೆಳಗಿನ ದಿನಚರಿಯನ್ನು ಉತ್ತಮವಾಗಿ ಆರಂಭಿಸಬೇಕಾದದ್ದು ಬಲು ಮುಖ್ಯ. ಶಾಂತತೆ, ಸಂಪೂರ್ಣ ಅರಿವು, ಆಂತರಿಕ ಶಕ್ತಿಯನ್ನು ನಿರ್ಮಿಸುವಲ್ಲಿ ನಮ್ಮ ಪ್ರಾಚೀನ ಅಭ್ಯಾಸಗಳು ನೆರವಾಗುತ್ತವೆ. ಹಾಗೆಯೇ ಬೆಳಗಿನ ದಿನಚರಿಯನ್ನು ಸರಿಯಾಗಿ ಆರಂಭಿಸಲು ಶಿವ ದೇವರಿಂದ ಪ್ರೇರಿತವಾದ ಕೆಲ ಅಭ್ಯಾಸಗಳು ಇಲ್ಲಿವೆ

ಜಗತ್ತು ಎಚ್ಚರಗೊಳ್ಳುವ ಮೊದಲು ಏಳುವುದು : ಅಂದರೆ ಬ್ರಹ್ಮಮುಹೂರ್ತದಲ್ಲಿ ಏಳುವುದು ಅಥವಾ ಬೇಗ ಎದ್ದು ದಿನಚರಿ ಆರಂಭಿಸುವುದು ಎಂದರ್ಥ

ನೀರನ್ನು ಅರ್ಪಿಸುವುದು : ಉದಯಿಸುತ್ತಿರುವ ಸೂರ್ಯನಿಗೆ, ಶಿವಲಿಂಗಕ್ಕೆ ಅಥವಾ ಭೂಮಿಗೆ ನೀರನ್ನು ಅರ್ಪಿಸುವುದು ಶರಣಾಗತಿ ಮತ್ತು ಹೊಂದಿಕೊಳ್ಳುವಿಕೆಯ ವಿಚಾರಗಳನ್ನು ಪ್ರತಿನಿಧಿಸುತ್ತದೆ

ಪರ್ವತದ ಸ್ಥಿರತೆಯೊಂದಿಗೆ ಕುಳಿತುಕೊಳ್ಳುವುದು : ಅಂದರೆ ಧ್ಯಾನ ಮಾಡುವುದು. ಇದು ಕೈಲಾಸ ಪರ್ವತದ ಮೇಲೆ ಶಿವನ ಧ್ಯಾನಸ್ಥ ನಿಲುವನ್ನು ಪ್ರತಿಬಿಂಬಿಸುತ್ತದೆ

ಕೃತಜ್ಞತೆಯ ಅಭ್ಯಾಸ : ಶಿವ ದೇವರನ್ನು ಸಾಮಾನ್ಯವಾಗಿ ಎಲ್ಲದರಿಂದ ಮುಕ್ತಗೊಂಡ, ಸಂಪೂರ್ಣವಾಗಿ ಸಂತೃಪ್ತನಾಗಿ ಚಿತ್ರಿಸಲಾಗಿದೆ. ಅಂತೆಯೇ ನೀವು ಕೃತಜ್ಞರಾಗಿರುವ ಐದು ವಿಷಯಗಳ ಬಗ್ಗೆ ಯೋಚಿಸಿ, ಜೀವನದಲ್ಲಿ ಎಲ್ಲಾ ಸಕಾರಾತ್ಮಕತೆಯನ್ನು ಸ್ವಾಗತಿಸಿ

ಓಂ ನಮಃ ಶಿವಾಯ ಪಠಣ : ಮಂತ್ರಗಳ ಪಠಣ ಮನಸ್ಸನ್ನು ಶುದ್ಧೀಕರಿಸಲು, ಮನಸ್ಸನ್ನು ಶಾಂತಗೊಳಿಸಲು, ಉತ್ತಮವಾಗಿ ಉಸಿರಾಡಲು ಸಹಾಯ ಮಾಡಲು ಕೊಡುಗೆ ನೀಡುತ್ತದೆ

ಈ ಎಲ್ಲಾ ಅಭ್ಯಾಸಗಳ ನಿಯಮಿತ ಪಾಲನೆ ನಿಮ್ಮಲ್ಲೊಂದು ಧನಾತ್ಮಕ ಬದಲಾವಣೆ ತರಲು ನೆರವಾಗುತ್ತದೆ ಎಂಬ ನಂಬಿಕೆ ಇದೆ

Show More

Related Articles

Leave a Reply

Your email address will not be published. Required fields are marked *

Back to top button