ವಿವಾದ ಆಗಬಹುದೆಂದು ಮೊದಲೇ ಡೈರೆಕ್ಟರ್‌ಗೆ ಹೇಳಿದ್ದೆ : ಕೆಡಿ ದಿ ಡೆವಿಲ್ ಚಿತ್ರದ ನಟಿ ನೋರಾ ಫತೇಹಿ
ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ” ದಿ ಡೆವಿಲ್ʼ ಚಿತ್ರದ ‘ಸರ್ಸೆ ನಿನ್ನ ಸೆರಗ’ ಹಾಡು ಭಾರೀ ವಿವಾದಕ್ಕೆ ಕಾರಣವಾಗಿದೆ. ಇದರಲ್ಲಿರುವ ಅಶ್ಲೀಲ ಅರ್ಥ ಬರುವ ಸಾಲುಗಳಿಗೆ ರಾಜ್ಯ ಸೇರಿ ಎಲ್ಲಾ ಕಡೆಗಳಿಂದಲೂ ವಿರೋಧ ವ್ಯಕ್ತವಾಗಿದೆ. ಜೊತೆಗೆ ಇದೇ ಹಿಂದಿ ಹಾಡಿಗೆ ಇನ್ನಷ್ಟು ಆಕ್ರೋಶ ವ್ಯಕ್ತವಾಗಿದ್ದು, ಇದನ್ನು ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಎಚ್ಚರಿಕೆಯನ್ನೂ ನೀಡಿದೆ. ಅಲ್ಲದೆ ಚಿತ್ರ ತಂಡದ ವಿರುದ್ಧವೂ ಕೇಸು ದಾಖಲಾಗಿದೆ.
ಈ ನಡುವೆ ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ ನೋರಾ ಫತೇಹಿ `ಇದು ವಿವಾದ ಆಗಬಹುದು ಎಂದು ಮೊದಲೇ ನಿರ್ದೇಶಕರಿಗೆ ತಿಳಿಸಿದ್ದೆ’ ಎಂದು ಹೇಳಿದ್ದಾರೆ. ಈ ಬಗ್ಗೆ ನೋರಾ ಫತೇರಿ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. `ಸಂಜಯ್ ದತ್ ಅವರಂತಹ ಹಿರಿಯ ನಟರು ಇರುವುದರಿಂದ ನಾನು ಈ ಹಾಡಿಗೆ ಒಪ್ಪಿಕೊಂಡೆ. ನನಗೆ ಕನ್ನಡ ಅರ್ಥವಾಗುವುದಿಲ್ಲವಾದುದರಿಂದ ಆ ಸಾಹಿತ್ಯ ನನಗೆ ಗೊತ್ತಾಗಿರಲಿಲ್ಲ. ಆದರೆ ಹಿಂದಿ ಹಾಡನ್ನು ಕೇಳಿದಾಗ
ಅದರ ಅರ್ಥ ಗೊತ್ತಿದ್ದ ನನಗೆ ಇದಕ್ಕೆ ವಿರೋಧ ಬರಬಹುದು. ಇದರಿಂದ ನನ್ನ ಗೌರವಕ್ಕೆ ಧಕ್ಕೆ ಬರುತ್ತದೆ ಎಂದು ನಿರ್ದೇಶಕರ ಬಳಿ ಹೇಳಿದ್ದೆ. ಹೀಗಾಗಿಯೇ ನಾನು ಈ ಹಾಡನ್ನು ಎಲ್ಲಿಯೂ ಪ್ರಚಾರ ಮಾಡಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ..
View this post on Instagram



