Sandalwood

`ಈ ಸಿನಿಮಾದಲ್ಲಿ ರಣಬೀರ್ ನಾನು ಮುಖಾಮುಖಿಯಾಗುವುದಿಲ್ಲ’ : ರಾಮಾಯಣದ ಬಗ್ಗೆ ಯಶ್ ಮಾತು

ರಾಕಿಂಗ್ ಸ್ಟಾರ್ ಯಶ್ ಬಾಲಿವುಡ್‍ನ `ರಾಮಾಯಣ’ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಇವರು ತೊಡಗಿದ್ದಾರೆ. ಲಾಸ್ ಏಂಜಲೀಸ್ ನಲ್ಲಿ ನಡೆದ `ಸಿನಿಮಾಕಾನ್ 2026′ ಯಲ್ಲಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೊಂದಿಗೆ ಪಾಲ್ಗೊಂಡಿದ್ದ ಯಶ್ ಅಂತಾರಾಷ್ಟ್ರೀಯ ಮಾಧ್ಯಮಗಳೊಂದಿಗೆ ಚಿತ್ರದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ಯಶ್ `ಈ ಚಿತ್ರದಲ್ಲಿ ರಣಬೀರ್ ಕಪೂರ್ ಹಾಗೂ ನಾನು ಮುಖಾಮುಖಿಯಾಗುವುದಿಲ್ಲ. ಇದು ಎರಡು ಭಾಗದ ಕಥೆ ಇರುವ ಚಿತ್ರವಾಗಿದೆ. ಮೊದಲ ಭಾಗದಲ್ಲಿ ರಾವಣ ತನ್ನದೇ ರಾಜ್ಯದಲ್ಲಿದ್ದರೆ, ರಾಮ ತನ್ನ ಪ್ರಪಂಚದಲ್ಲಿ ಇರುತ್ತಾನೆ. ಹೀಗೆ ಕಥೆ ಮುಂದುವರಿದಂತೆ ಸನ್ನಿವೇಶಗಳನ್ನು ನಮ್ಮಿಬ್ಬರನ್ನು ಒಟ್ಟಿಗೆ ತರುತ್ತದೆ’ ಎಂದು ಯಶ್ ಹೇಳಿಕೊಂಡಿದ್ದಾರೆ.

ಇನ್ನು ರಣಬೀರ್ ಕಪೂರ್ ಅದ್ಭುತ ನಟ ಎಂದೂ ಯಶ್ ಕೊಂಡಾಡಿದ್ದಾರೆ. ರಾಮಾಯಣ ಚಿತ್ರದಲ್ಲಿ ಯಶ್ ರಾವಣನ ಪಾತ್ರವನ್ನು ನಿರ್ವಹಿಸಿದರೆ, ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸಿದ್ದಾರೆ. ಸಾಯಿ ಪಲ್ಲವಿ ಸೀತೆಯನ್ನು ಮತ್ತು ಸನ್ನಿ ಡಿಯೋಲ್ ಹನುಮನ ಪಾತ್ರವನ್ನು ನಿರ್ವಹಿಸುತ್ತಾರೆ. ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button