Automobile

VinFast VF MPV 7 electric MPV : ಎಂಟ್ರಿ ಕೊಟ್ಟಿದೆ ಹೊಸ ವಿನ್ ಫಾಸ್ಟ್ ವಿಎಫ್ ಎಂಪಿವಿ 7 ಎಲೆಕ್ಟ್ರಿಕ್ ಎಂಪಿವಿ : ಬೆಲೆ ಎಷ್ಟು ಲಕ್ಷ?

ವಿನ್ ಫಾಸ್ಟ್ ಇಂಡಿಯಾ ಭಾರತದಲ್ಲಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಹಾಗೂ ಎಂಪಿವಿ ಸೆಗ್ಮೆಂಟಿನತ್ತ ಹೆಚ್ಚಿನ ಗಮನ ಹರಿಸುತ್ತಿದೆ. ಹೀಗಾಗಿ ಈ ಸಂಸ್ಥೆ ತನ್ನ ಹೊಸ ಎಂಟ್ರಿ ಕೊಟ್ಟಿದೆ ಹೊಸ ವಿನ್ ಫಾಸ್ಟ್ ವಿಎಫ್ ಎಂಪಿವಿ 7 ಎಲೆಕ್ಟ್ರಿಕ್ ಎಂಪಿವಿಯನ್ನು ಭಾರತೀಯ ವಾಹನ ಮಾರುಕಟ್ಟೆಗೆ ಪರಿಚಯಿಸಿದೆ.

ಇದರ ಎಕ್ಸ್ ಶೋರೂಮ್ ಬೆಲೆ 24.49 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ. ಈ ಇವಿ ಎಂಪಿವಿಗಾಗಿ ಬುಕ್ಕಿಂಗ್ ಈಗಾಗಲೇ ಶುರುವಾಗಿದೆ. ಡೆಲಿವರಿ ಶೀಘ್ರ ಆರಂಭವಾಗುವ ನಿರೀಕ್ಷೆ ಇದೆ. ಆಸಕ್ತ ಗ್ರಾಹಕರು ಆನ್‍ಲೈನ್‍ನಲ್ಲಿ ಅಥವಾ ಹತ್ತಿರದ ಡೀಲರ್‌ಶಿಪ್‌ಗಳಿಗೆ ಭೇಟಿ ನೀಡಿ ಹೊಸ ಎಂಪಿವಿಯನ್ನು ಬುಕ್ ಮಾಡಿಕೊಳ್ಳಬಹುದು.

ಬ್ಯಾಟರಿ ಸಾಮರ್ಥ್ಯ :
ಹೊಸ ವಿನ್ ಫಾಸ್ಟ್ ವಿಎಫ್ ಎಂಪಿವಿ 7 60.13 kWh ಬ್ಯಾಟರಿ ಪ್ಯಾಕ್‍ನಿಂದ ಚಾಲಿತವಾಗಿದೆ. ಇದು ಒಂದೇ ಎಲೆಕ್ಟ್ರಿಕ್ ಮೋಟಾರ್‍ನೊಂದಿಗೆ ಜೋಡಿಸಲ್ಪಟ್ಟಿದೆ. ಇದು 201 ಪಿಎಸ್ ಶಕ್ತಿ ಹಾಗೂ 400 ನ್ಯೂಟನ್ ಮೀಟರ್ ಟಾರ್ಕ್ ಹೊರಹಾಕುತ್ತದೆ. ಒಂದು ಸಂಪೂರ್ಣ ಚಾರ್ಜ್‍ನಲ್ಲಿ ಇದು 517 ಕಿಮೀ ದೂರ ಕ್ರಮಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇದು 11 kW AC ಚಾರ್ಜಿಂಗ್ ಮತ್ತು 80 kW DC ಫಾಸ್ಟ್ ಚಾರ್ಜಿಂಗ್ ಅನ್ನು ಹೊಂದಿದೆ. ಇದರ ಬ್ಯಾಟರಿಯನ್ನು ಸುಮಾರು 30 ನಿಮಿಷಗಳಲ್ಲಿ ಶೇಕಡಾ 10 ರಿಂದ 70 ರಷ್ಟು ಚಾರ್ಜ್ ಮಾಡಬಹುದು.


ಹೊಸ ವಿನ್ ಫಾಸ್ಟ್ ವಿಎಫ್ ಎಂಪಿವಿ 7 ಮೂರು ವರ್ಷಗಳ ಉಚಿತ ನಿರ್ವಹಣೆ, ಮಾರ್ಚ್ 31, 2029 ರವರೆಗೆ ಉಚಿತ ಚಾಜಿರ್ಂಗ್, ಏಳು ವರ್ಷಗಳ ವಾಹನ ಖಾತರಿ, 10 ವರ್ಷಗಳ ಬ್ಯಾಟರಿ ಖಾತರಿ, 75% ವರೆಗೆ ಖಚಿತವಾದ ಮರುಖರೀದಿ, ಏಳು ವರ್ಷಗಳ ಉಚಿತ ರಸ್ತೆಬದಿಯ ಸಹಾಯ ಮತ್ತು ಹೆಚ್ಚುವರಿ ಐಸಿಇ ಯಿಂದ ಇವಿಗೆ ಪರಿವರ್ತನೆ ಬೆಂಬಲ ಸೇರಿದಂತೆ ಪ್ರಯೋಜನಗಳೊಂದಿಗೆ ಬರುತ್ತದೆ.

ಭಾರತೀಯ ಮಾರುಕಟ್ಟೆಯಲ್ಲಿ ಇದು ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಇವಿ, ಬಿವೈಡಿ ಎಮ್ಯಾಕ್ಸ್7 ಹಾಗೂ ಮಹೀಂದ್ರಾ ಎಕ್ಸ್‍ಇವಿ 9ಎಸ್ ಜೊತೆಗೆ ಇದು ಸ್ಪರ್ಧಿಸಲಿದೆ.

Show More

Related Articles

Leave a Reply

Your email address will not be published. Required fields are marked *

Back to top button