Sandalwood

ಎಐ ಮೂಲಕ ಬಿಕಿನಿ ವಿಡಿಯೋ ಸೃಷ್ಟಿ : ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ನಟಿ ರುಕ್ಮಿಣಿ ವಸಂತ್

ಬಹುಭಾಷಾ ನಟಿ, ಕನ್ನಡತಿ ರುಕ್ಮಿಣಿ ವಸಂತ್ ಅವರು ಬಿಕಿನಿ ಧರಿಸಿದ ರೀತಿ ಎಐಯಲ್ಲಿ ಫೋಟೋ, ವಿಡಿಯೋವನ್ನು ಸೃಷ್ಟಿಸಿ ಕಿಡಿಗೇಡಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರುಕ್ಮಿಣಿ ವಸಂತ್, ಈ ಯಾವ ಫೋಟೋ, ವಿಡಿಯೋಗಳೂ ಅಸಲಿಯಲ್ಲ. ಇವೆಲ್ಲವನ್ನೂ ಎಐ ಮೂಲಕ ರೂಪಿಸಲಾಗಿದೆ ಎಂದು ಹೇಳಿದ್ದಾರೆ.


ತನ್ನ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಅವರು, ‘ಎಐ ಮೂಲಕ ಸೃಷ್ಟಿಸಿದ ನನ್ನ ಕೆಲವು ಫೋಟೋಗಳನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇವೆಲ್ಲವೂ ಸಂಪೂರ್ಣವಾಗಿ ನಕಲಿಯಾಗಿವೆ. ಇದು ಬೇಜವಾಬ್ದಾರಿ ಕೆಲಸವಾಗಿದ್ದು, ಗೋಪ್ಯತೆಯ ಉಲ್ಲಂಘನೆಯಾಗಿದೆ. ಈ ವಿಷಯವನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಈ ಫೋಟೋಗಳನ್ನು ರಚಿಸುವವರ ಹಾಗೂ ಹರಡುತ್ತಿರುವವರ ವಿರುದ್ಧ ಅಗತ್ಯ ಕಾನೂನು ಮತ್ತು ಸೈಬರ್ ಅಪರಾಧ ಕ್ರಮ ಕೈಗೊಳ್ಳುತ್ತಿದ್ದೇವೆ. ಈ ರೀತಿಯ ವಿಷಯವನ್ನು ಹಂಚಿಕೊಳ್ಳುವುದರಿAದ ಅಥವಾ ಅದರೊಂದಿಗೆ ತೊಡಗಿಸಿಕೊಳ್ಳುವುದರಿಂದ ದೂರವಿರಿ ಎಂದು ವಿನಂತಿಸುತ್ತೇನೆ’ ಎಂದು ರುಕ್ಮಿಣಿ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button