Sandalwood

ಗಣೇಶ್ ಗೋಲ್ಡನ್ ದಿನಗಳು : `ಕಾಮಿಡಿ ಟೈಮ್‌’ ನಿಂದ ನಾಯಕನಾಗಿ 20 ವರ್ಷಗಳ ಸಿನಿಪಯಣ

ಗೋಲ್ಡನ್‌ ಸ್ಟಾರ್ ಗಣೇಶ್ ನಾಯಕನಾಗಿ ತನ್ನ ಸಿನಿಪಯಣವನ್ನು ಆರಂಭಿಸಿ ಭರ್ತಿ 20 ವರ್ಷ ತುಂಬಿದೆ. ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರ, `ಕಾಮಿಡಿ ಟೈಮ್‌’ ಎಂಬ ಹೆಸರು ತಂದುಕೊಟ್ಟ ಕಾರ್ಯಕ್ರಮದ ಬಳಿಕ ಗಣೇಶ್ ಕಾಲಿಟ್ಟದ್ದು ಸಿನಿ ಲೋಕಕ್ಕೆ. ಎಂಡಿ ಶ್ರೀಧರ್ ನಿರ್ದೇಶಿಸಿದ `ಚೆಲ್ಲಾಟ’ ಚಿತ್ರದ ಮೂಲಕ ಗಣೇಶ್ ಸಿನಿಲೋಕಕ್ಕೆ ಕಾಲಿಟ್ಟದರೂ, ಅದೇ ವರ್ಷ ರಿಲೀಸ್ ಆಗಿದ್ದ ` ಮುಂಗಾರು ಮಳೆ’ ಚಿತ್ರ ಗಣೇಶ್‌ ಬದುಕಿನ ದಿಕ್ಕನ್ನೇ ಬದಲಾಯಿಸಿತ್ತು. ಸೂಪರ್ ಹಿಟ್ ಆದ ಈ ಸಿನಿಮಾ ಗಣೇಶ್ ಅವರ ಸಿನಿಲೋಕದಲ್ಲಿ ದೊಡ್ಡ ಮೈಲುಗಲ್ಲಾದ ಚಿತ್ರವೂ ಹೌದು.

 

View this post on Instagram

 

A post shared by Ganesh (@goldenstar_ganesh)


ಹೀಗೆ 20 ವರ್ಷಗಳ ಹಿಂದೆ ಶುರುವಾಗಿದ್ದ ಈ ಸಿನಿಮಾ ಪಯಣದಲ್ಲಿ ಗಣೇಶ್ ಸುಮಾರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮದೇ ಆದ ವಿಶಿಷ್ಟ ನಟನಾ ಕೌಶಲ್ಯ, ಡೈಲಾಗ್ ಡೆಲಿವರಿ, ಟೈಮಿಂಗ್, ಕಾಮಿಡಿ ಎಲ್ಲವೂ ಗಣೇಶ್ ಅವರ ಕೈ ಹಿಡಿದಿದೆ. ಹೀಗಾಗಿಯೇ ಗಣೇಶ್ `ಗೋಲ್ಡನ್ ಸ್ಟಾರ್’ ಆಗಿ ಜನಮಾನಸದಲ್ಲಿ ಮಿಂಚುತ್ತಿದ್ದಾರೆ.

ನಾಯಕನಾಗಿ 20 ವರ್ಷಗಳನ್ನು ಪೂರೈಸುತ್ತಿರುವ ಗಣೇಶ್ ಸಿನಿರಂಗದಲ್ಲಿ ಈಗಲೂ ಸಕ್ರಿಯರಾಗಿದ್ದಾರೆ. ಶ್ರೀನಿವಾಸ್ ರಾಜು ನಿರ್ದೇಶನದ ಬೃಂದಾ ವಿಹಾರಿ ಚಿತ್ರದ ಕೆಲಸದಲ್ಲಿ ಇವರು ತೊಡಗಿದ್ದಾರೆ. ಜೊತೆಗೆ ಇನ್ನೂ ಕೆಲವೊಂದು ಪ್ರಾಜೆಕ್ಟ್‌ಗಳು ಗಣೇಶ್ ಕೈಯಲ್ಲಿದೆ.

Show More

Related Articles

Leave a Reply

Your email address will not be published. Required fields are marked *

Back to top button