Bollywood
ಬಣ್ಣದ ಲೋಕಕ್ಕೆ ಕಾಲಿಟ್ಟ ರಿತೇಶ್-ಜೆನಿಲಿಯಾ ಪುತ್ರ

ನಟ, ನಿರ್ಮಾಪಕ ರಿತೇಶ್ ದೇಶಮುಖ್ ಈಗ ತನ್ನ ಬಹುನಿರೀಕ್ಷಿತ ರಾಜಾ ಶಿವಾಜಿ ಚಿತ್ರದ ಕೆಲಸದಲ್ಲಿ ತೊಡಗಿದ್ದಾರೆ. ರಿತೇಶ್ ಪತ್ನಿ ಜೆನಿಲಿಯಾ ಅವರೇ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ದಂಪತಿಗೆ ಇನ್ನೊಂದು ಖುಷಿಯ ವಿಷಯ ಏನೆಂದರೆ ಇವರ ಕಿರಿಯ ಮಗ 10 ವರ್ಷದ ರಾಹಿಲ್ ಈ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾನೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೇಲರ್ನಲ್ಲಿ ರಾಹಿಲ್ ಕಾಣಿಸಿಕೊಂಡಿದ್ದಾನೆ.
ಛತ್ರಪತಿ ಶಿವಾಜಿ ಮಹಾರಾಜರ ಬಾಲ್ಯದ ಪಾತ್ರವನ್ನು ರಾಹಿಲ್ ನಿರ್ವಹಿಸುತ್ತಿದ್ದಾನೆ. ರಿತೇಶ್ ದೇಶಮುಖ್ ಶಿವಾಜಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನೂ ಇವರೇ ಹೊತ್ತಿದ್ದಾರೆ. ಈ ಸಿನಿಮಾ ಸಂಜಯ್ ದತ್, ಅಭಿಷೇಕ್ ಬಚ್ಚನ್ ಮತ್ತು ವಿದ್ಯಾ ಬಾಲನ್ ಸೇರಿದಂತೆ ಬೃಹತ್ ತಾರಾಗಣವನ್ನು ಹೊಂದಿದೆ. ಮೇ 1 ರಂದು ಈ ಸಿನಿಮಾ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.



