Sandalwood

ವರನಟ ರಾಜ್‍ಕುಮಾರ್ ಅಭಿನಯದ ಚಿತ್ರದ ಭಕ್ತಿಗೀತೆ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ವರನಟ ಡಾ. ರಾಜ್‍ಕುಮಾರ್ ಅಭಿನಯದ ಚಿತ್ರವೊಂದರ ಹಾಡನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶ್ರೀಕೃಷ್ಣದೇವರಾಯ ಚಲನಚಿತ್ರದ ಚಾಮುಂಡೇಶ್ವರಿ ದೇವಿಯ ಭಕ್ತಿಗೀತೆಯನ್ನು ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ. ಜೊತೆಗೆ `ಜಗತ್‍ಜನನಿ ಮಾತೆಯ ಮೇಲೆ ಅಚಲ ನಂಬಿಕೆಯು ಆಕೆಯ ಭಕ್ತರಿಗೆ ಹೊಸ ಚೈತನ್ಯ ಹಾಗೂ ಸ್ಫೂರ್ತಿಯನ್ನು ತುಂಬುತ್ತದೆ’ ಎಂದೂ ತಮ್ಮ ಪೋಸ್ಟ್‍ನಲ್ಲಿ ಬರೆದುಕೊಂಡಿದ್ದಾರೆ.


1970ರಲ್ಲಿ ಬಿಡುಗಡೆಯಾದ ಶ್ರೀಕೃಷ್ಣದೇವರಾಯ ಸಿನಿಮಾದಲ್ಲಿ ಡಾ. ರಾಜ್‍ಕುಮಾರ್, ಜಯಂತಿ, ಭಾರತಿ, ನರಸಿಂಹರಾಜು ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದರು. ಈ ಚಿತ್ರದ ಎಲ್ಲಾ ಗೀತೆಗಳು ಜನಪ್ರಿಯವಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಚಿತ್ರದ ಹಾಡನ್ನು ಹಂಚಿಕೊಳ್ಳುವ ಮೂಲಕ ಈ ಭಕ್ತಗೀತೆ ಮತ್ತೆ ಮುನ್ನೆಲೆಗೆ ಬಂದಿದೆ.

Show More

Related Articles

Leave a Reply

Your email address will not be published. Required fields are marked *

Back to top button