Kollywood

ಎಂಜಿಆರ್ ಅವಹೇಳನ : ತೆಲುಗು ನಟ ರಾಜೇಂದ್ರ ಪ್ರಸಾದ್ ಕ್ಷಮೆಯಾಚನೆಗೆ ಆಗ್ರಹ

ತಮಿಳು ಚಿತ್ರರಂಗದ ದಂತಕತೆ, ಮಾಜಿ ಮುಖ್ಯಮಂತ್ರಿ, ದಿವಂಗತ ನಟ ಎಂ ಜಿ ರಾಮಚಂದ್ರನ್ (ಎಂಜಿಆರ್) ಅವರ ಬಗ್ಗೆ ಟಾಲಿವುಡ್ ಹಿರಿಯ ನಟ ರಾಜೇಂದ್ರ ಪ್ರಸಾದ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ರಾಜೇಂದ್ರ ಪ್ರಸಾದ್ ಕ್ಷಮೆಯಾಚನೆಗೆ ಹಲವು ಆಗ್ರಹಿಸಿದ್ದಾರೆ.

ತೆಲುಗಿನ ಹಿರಿಯ ನಟ, ನಿರ್ಮಾಪಕ ಕಾಂತಾರಾವ್ ಅವರ ಗೌರವಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜೇಂದ್ರ ಪ್ರಸಾದ್ ಅವರು ಕಾಂತಾರಾವ್ ಅವರನ್ನು ಹೊಗಳುವ ಭರದಲ್ಲಿ ಎಂಜಿಆರ್ ಬಗ್ಗೆ ಕೀಳು ಮಟ್ಟದ ಪದ ಪ್ರಯೋಗ ಮಾಡಿದ್ದಾರೆ. ಕಾಂತಾರಾವ್ ಅವರ ನಟನೆಯನ್ನು ಕಂಡು ಎಂಜಿಆರ್ ಹೆದರುತ್ತಿದ್ದರು. ಅವರ ಪ್ಯಾಂಟ್ ಒದ್ದೆಯಾಗುತ್ತಿತ್ತು ಎಂದು ಇವರು ಹೇಳಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಭಾರತೀಯ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ನಟ ವಿಶಾಲ್, ರಾಜೇಂದ್ರ ಪ್ರಸಾದ್ ಮಾತನ್ನು ತೀವ್ರವಾಗಿ ಖಂಡಿಸಿದ್ದಾರೆ. ಒಬ್ಬ ನಟ ಇನ್ನೋರ್ವ ನಟನನ್ನು ಹೊಗಳುವುದು ಶ್ಲಾಘನೀಯ, ಆದರೆ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವ ದಂತಕತೆ ಎಂಜಿಆರ್ ಅವರನ್ನು ಕೀಳಾಗಿ ನೋಡುವುದು ಮತ್ತು ಅವಮಾನಿಸುವುದು ಸರಿಯಲ್ಲ. ಹೀಗಾಗಿ ರಾಜೇಂದ್ರ ಪ್ರಸಾದ್ ಕ್ಷಮೆಯಾಚಿಸಬೇಕು ಎಂದು ಇವರು ಒತ್ತಾಯಿಸಿದ್ದಾರೆ.


ಜೊತೆಗೆ ಬಹುಭಾಷಾ ನಟ ನಾಸರ್ ಸೇರಿ ಸಾಕಷ್ಟು ಮಂದಿ ರಾಜೇಂದ್ರ ಪ್ರಸಾದ್ ಮಾತನ್ನು ವಿರೋಧಿಸಿದ್ದು, ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button