Tollywood
31 ವರ್ಷದ ತೆಲುಗು ನಟನ ದಾರುಣ ಅಂತ್ಯ
ತೆಲುಗು ನಟ ಭರತ್ ಕಾಂತ್ ದುರ್ಮರಣಕ್ಕೀಡಾಗಿದ್ದಾರೆ. 31 ವರ್ಷದ ಈ ನಟ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಮೇ 10 ರಂದು ತಡರಾತ್ರಿ ಹೈದರಾಬಾದ್ನ ಹೊರವರ್ತುಲ ರಸ್ತೆಯಲ್ಲಿ ಇವರು ಪ್ರಯಾಣಿಸುತ್ತಿದ್ದ ಕಾರು ಟ್ರಕ್ ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ ಭರತ್ ಅವರೊಂದಿಗೆ ಪ್ರಯಾಣಿಸುತ್ತಿದ್ದ ಇನ್ನೊಬ್ಬರು ಕೂಡಾ ಸಾವನ್ನಪ್ಪಿದ್ದಾರೆ.
ಹಲವು ಚಿತ್ರಗಳು, ವೆಬ್ ಸೀರೀಸ್ಗಳಲ್ಲೂ ಭರತ್ ಕಾಂತ್ ನಟಿಸಿದ್ದರು.



