Kollywood

ಅಭಿಮಾನಿ ಸಂಘಗಳ ಇಬ್ಬರು ಆಡಳಿತಾಧಿಕಾರಿಗಳ ಮಕ್ಕಳ ಶಿಕ್ಷಣದ ಜವಾಬ್ದಾರಿ ವಹಿಸಿಕೊಂಡ ನಟ ಧನುಷ್

ತಮಿಳಿನ ಖ್ಯಾತ ನಟ, ನಿರ್ದೇಶಕ ಧನುಷ್ ಎರಡು ವಿಭಿನ್ನ ಜಿಲ್ಲೆಗಳಲ್ಲಿ ಇರುವ ತಮ್ಮ ಅಭಿಮಾನಿ ಸಂಘಗಳ ಇಬ್ಬರು ಆಡಳಿತಾಧಿಕಾರಿಗಳ ಮಕ್ಕಳ ಶಿಕ್ಷಣದ ವೆಚ್ಚದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಕಡಲೂರಿನ ಅಭಿಮಾನಿ ಸಂಘದ ಆಡಳಿತಾಧಿಕಾರಿ ರಾಜಶೇಖರನ್ ಅವರ ಪುತ್ರಿ ಹರಿಶಿತಾ ಅವರ ಎಂಜಿನಿಯರಿಂಗ್ ಶಿಕ್ಷಣದ ವೆಚ್ಚ ಹಾಗೂ ವೆಲ್ಲೂರಿನ ಅಭಿಮಾನಿ ಸಂಘದ ಆಡಳಿತಾಧಿಕಾರಿ ಧನಶೇಖರ್ ಅವರ ಪುತ್ರಿ ಶ್ವೇತಾ ಅವರ ಎಂಬಿಬಿಎಸ್ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಧನುಷ್ ಅವರು ವಹಿಸಿಕೊಂಡಿದ್ದಾರೆ.

ಹೀಗಾಗಿ ಈ ಇಬ್ಬರ ಕುಟುಂಬಗಳೂ ಧನುಷ್ ಅವರನ್ನು ಭೇಟಿಯಾಗಿ ಧನ್ಯವಾದ ಅರ್ಪಿಸಿವೆ. ಧನುಷ್ ಅವರ ಮುಂಬರುವ ಚಿತ್ರ ಓಂ ಚಿತ್ರೀಕರಣದ ಸ್ಥಳಕ್ಕೆ ಭೇಟಿ ಇವರು ಭೇಟಿ ನೀಡಿದ್ದು, ಈ ವೇಳೆ ಧನುಷ್ ಅವರು ಶೈಕ್ಷಣಿಕ ವೆಚ್ಚವನ್ನು ಭರಿಸಲು ಚೆಕ್‍ಗಳನ್ನು ನೀಡಿದ್ದಾರೆ.

ಇತ್ತೀಚೆಗೆ ಖ್ಯಾತ ನಟ ಅಲ್ಲು ಅರ್ಜುನ್ ಅವರು ಕೂಡಾ ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಗೆ ಅಪಘಾತ ವಿಮೆ ಮಾಡಿಸಿದ್ದರು. ನಟರ ಈ ಸಮಾಜಮುಖಿ ಕಾರ್ಯ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button