‘ಉಳಿದವರು ಕಂಡಂತೆ’ ಚಿತ್ರಕ್ಕೆ 12 ವರ್ಷ : ಆ ದಿನಗಳನ್ನು ನೆನಪಿಸಿಕೊಂಡ ರಕ್ಷಿತ್ ಶೆಟ್ಟಿ
ಸ್ಯಾಂಡಲ್‌ವುಡ್‌ನ ವಿಭಿನ್ನ ಚಿತ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ‘ಉಳಿದವರು ಕಂಡಂತೆ‘ ಸಿನಿಮಾ ಹನ್ನೆರಡು ವರ್ಷ ಪೂರ್ಣಗೊಳಿಸಿದೆ. 2014ರ ಮಾರ್ಚ್ 28ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಚಿತ್ರಕಥೆ, ವಿಭಿನ್ನವಾಗಿ ಚಿತ್ರವನ್ನು ಕಟ್ಟಿಕೊಟ್ಟ ಜಾಣ್ಮೆ ಸೇರಿದಂತೆ ಸಾಕಷ್ಟು ಕಾರಣಗಳಿಂದ ಗಮನ ಸೆಳೆದಿತ್ತು. ರಕ್ಷಿತ್ ಶೆಟ್ಟಿ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿತ್ತು. ಜೊತೆಗೆ ರಕ್ಷಿತ್ ಶೆಟ್ಟಿ ಅವರ ವಿಶಿಷ್ಟ ಕಥೆ ಹೇಳುವ ಕೌಶಲ್ಯವೂ ಈ ಚಿತ್ರದ ಮೂಲಕ ಪರಿಚಯವಾಗಿತ್ತು.
ಹೀಗೆ ತಮ್ಮ ಬದುಕಿನಲ್ಲಿ ಉತ್ತಮ ಹೆಸರು ತಂದುಕೊಟ್ಟಿದ್ದ ಈ ಚಿತ್ರದ ಪೋಸ್ಟರ್ ಅನ್ನು ರಕ್ಷಿತ್ ಶೆಟ್ಟಿ ಹಂಚಿಕೊಂಡಿದ್ದಾರೆ. ಜೊತೆಗೆ ಸಿನಿಮಾವನ್ನು ನೆನಪು ಮಾಡಿಕೊಳ್ಳಲು ಏನೇನೋ ಹೊಸ ಕಾರಣಗಳು ಸಿಗುತ್ತಲೇ ಇರುತ್ತವೆ ಎಂದಿದ್ದಾರೆ.
View this post on Instagram
ಆ ಸಿನಿಮಾ ತೆರೆಕಂಡಾಗ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ ನಿಜ. ಆದರೆ ಆ ಬಳಿಕ ಇದೊಂದು ಕಲ್ಟ್ ಕ್ಲಾಸಿಕ್ ಸ್ಥಾನಮಾವನ್ನು ಪಡೆದುಕೊಂಡಿತು. ಈ ಚಿತ್ರ ಈಗ ತನ್ನದೇ ಆದ ದೊಡ್ಡ ಅಭಿಮಾನಿ ಬಳಗವನ್ನೂ ಹೊಂದಿದೆ.



