Tollywood

ಸಲ್ಮಾನ್ ಜೊತೆಗೂಡಿ ಚಿತ್ರ ನಿರ್ಮಿಸಲಿದ್ದಾರೆ ದಿಲ್ ರಾಜು

ತೆಲುಗಿನ ನಿರ್ಮಾಪಕ ದಿಲ್‌ ರಾಜು, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರೊಂದಿಗೆ ಚಿತ್ರ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ SVC63 ಎಂದು ಹೆಸರಿಸಲಾಗಿದೆ. ಈ ಬಗ್ಗೆ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿರುವ ಚಿತ್ರ ತಂಡ, ವಂಶಿ ಪೈಡಿಪಲ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಂದು ತಿಳಿಸಿದೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿಯೂ ಮಾಹಿತಿ ಹಂಚಿಕೊಳ್ಳಲಾಗಿದೆ.


ಈ ಚಿತ್ರದ ಶೂಟಿಂಗ್ ಏಪ್ರಿಲ್‌ನಿಂದ ಆರಂಭವಾಗಲಿದೆ. ಬಾಕಿ ಉಳಿದಂತೆ ಪಾತ್ರವರ್ಗ, ತಂತ್ರಜ್ಞರ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಸಲ್ಮಾನ್ ಕೂಡ ತಮ್ಮ ಎಕ್ಸ್ ಖಾತೆಯಲ್ಲಿ ಈ ಪ್ರಾಜೆಕ್ಟ್‌ನ ಬಗ್ಗೆ ಪೋಸ್ಟ್ ಮಾಡಿದ್ದಾರೆ.


ಸಲ್ಮಾನ್ ಜೊತೆಗಿನ ಈ ಪ್ರಾಜೆಕ್ಟ್ ಜೊತೆಗೆ ದಿಲ್ ರಾಜು ಸಂಕ್ರಾಂತಿಕಿ ವಾಸ್ತುನಂ ಚಿತ್ರದ ಹಿಂದಿ ರಿಮೇಕ್ ಅನ್ನೂ ನಿರ್ಮಿಸುತ್ತಿದ್ದಾರೆ. ಇದರಲ್ಲಿ ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ. ವೆಲ್ಕಮ್ ಮತ್ತು ನೋ ಎಂಟ್ರಿಯಂತಹ ಹಾಸ್ಯ ಚಿತ್ರಗಳಿಗೆ ಹೆಸರುವಾಸಿಯಾದ ಅನೀಸ್ ಬಾಜ್ಮಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button