News Roundup
24 ವರ್ಷಗಳ ಹಿಂದಿನ ಬ್ಯಾಂಕ್ ವಂಚನೆ ಪ್ರಕರಣ : ಆರೋಪಿ ಸೆರೆ

24 ವರ್ಷಗಳ ಹಿಂದಿನ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ – ಸಿಬಿಐ ಆರೋಪಿಯನ್ನು ಬಂಧಿಸಿದೆ. ಹರ್ಪಾಲ್ ಸಿಂಗ್ ಅಹುಜಾ ಬಂಧಿತ ಆರೋಪಿ. ಮುಂಬೈ ಹಾಗೂ ಫರೀದಾಬಾದ್ ನಡುವೆ ತನ್ನ ವಾಸ್ತವ್ಯದ ಸ್ಥಳ ಬದಲಾಯಿಸುತ್ತಾ ಆರೋಪಿ ಇಷ್ಟು ದಿನ ತಲೆಮರೆಸಿಕೊಂಡಿದ್ದ. ಈತನನ್ನು ಮಾರ್ಚ್ 12ರಂದು ಅಧಿಕಾರಿಗಳು ಬಂಧಿಸಿದ್ದರು. ಇದಾದ ಬಳಿಕ ಈತನನ್ನು ಗಾಜಿಯಾಬಾದ್ನ ಸಿಬಿಐ ನ್ಯಾಯಾಲಯದ ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಈತನನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ.
2001ರ ಏಪ್ರಿಲ್ 27ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದ ಸಿಬಿಐ 2003ರ ಮಾರ್ಚ್ 19ರಂದು ಆರೋಪಿ ಹಾಗೂ ಇತರರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿತ್ತು. ಹರ್ಪಾಲ್ ಸಿಂಗ್ ಅಹುಜಾ ಈ ಪ್ರಕರಣದ ಪ್ರಮುಖ ಸಂಚುಕೋರನಾಗಿದ್ದು, ಈತ 2014ರಲ್ಲಿ ವಿಚಾರಣಾ ಪ್ರಕ್ರಿಯೆಯ ಸಮಯದಲ್ಲಿ ಪರಾರಿಯಾಗಿದ್ದ.



