ನಟ ರಾಜ್ಪಾಲ್ ಯಾದವ್ಗೆ ಅಪಮಾನ ಮಾಡಿದರಾ ಅಕ್ಷಯ್ ಕುಮಾರ್? : ಏನಿದು ವಿವಾದ? ರಾಜ್ಪಾಲ್ ಪ್ರತಿಕ್ರಿಯೆ ಏನು?
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಸದ್ಯ ತನ್ನ ಮುಂದಿನ ಚಿತ್ರ ಭೂತ್ ಬಂಗ್ಲಾದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಆದರೆ ಈ ಪ್ರಚಾರದ ಸಂದರ್ಭದಲ್ಲಿ ಇವರು ಸಹನಟ ರಾಜ್ಪಾಲ್ ಯಾದವ್ಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿತ್ತು.
ಇತ್ತೀಚೆಗೆ ನಟಿ ಪ್ರಿಯಾಂಕಾ ಚಾಹರ್ ಚೌಧರಿ, ಏಕ್ತಾ ಕಪೂರ್ ಮತ್ತು ಕನಿಕಾ ಮಾನ್ ಅವರೊಂದಿಗೆ ಫೋಟೋಗೆ ಪೋಸ್ ನೀಡುತ್ತಿರುವ ಅಕ್ಷಯ್ ಕುಮಾರ್ ರಾಜ್ಪಾಲ್ ಯಾದವ್ ಅವರನ್ನು ಫ್ರೇಮ್ನ ಬಲಭಾಗದಲ್ಲಿ ನಿಲ್ಲುವಂತೆ ಕೇಳುವ ವಿಡಿಯೋ ವೈರಲ್ ಆಗಿತ್ತು. ಇದನ್ನು ಕಂಡ ಕೆಲವರು ಇದು ರಾಜ್ಪಾಲ್ ಯಾದವ್ ಅವರಿಗೆ ಅಕ್ಷಯ್ ಕುಮಾರ್ ಮಾಡಿದ ಅಪಮಾನ ಎಂದು ಆರೋಪಿಸಿದ್ದರು.
साइड मे 🥺.
.
.#akshaykumar #rajpalyadav #tahirjasus #Bollywoo pic.twitter.com/Bk6kYAgjYu— Tahir Jasus (@Tahirjasus) March 21, 2026
ಈಗ ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಜ್ಪಾಲ್ ಯಾದವ್, ಮೂವರು ಮಹಿಳೆಯರು ನಡುವೆ ನಿಂತಿರುವಾಗ ಪುರುಷರು ಎರಡೂ ಬದಿಯಲ್ಲಿ ನಿಲ್ಲುವ ಬಗ್ಗೆ ಅಕ್ಷಯ್ ನಿರ್ಧರಿಸಿದ್ದರು. ಅದರಂತೆ ನಾವು ಮಾಡಿದೆವು. ಇದು ಅಕ್ಷಯ್ ಅವರು ಸಾಮಾನ್ಯವಾಗಿ ಫೋಟೋಗೆ ನಿಲ್ಲುವ ವಿಧಾನವಾಗಿದೆ. ಆ ದಿನ ಅಕ್ಷಯ್ ಮತ್ತು ಏಕ್ತಾ ಇಬ್ಬರೂ ಇತರ ಇಬ್ಬರು ಹುಡುಗಿಯರೊಂದಿಗೆ ಬಂದಿದ್ದರು. ನಾನು ತಡವಾಗಿ ಬಂದೆ. ಅವರು ನನಗಾಗಿ ಕಾಯುತ್ತಿದ್ದರು. ನಾನು ಓಡಿ ಬಂದ ತಕ್ಷಣ ನಟಿಯರ ಮಧ್ಯೆ ನಿಂತಿದ್ದೆ. ಆಗ ಅಕ್ಷಯ್ ಅವರು ಮೊದಲೇ ನಿರ್ಧರಿಸಿದಂತೆ ಇನ್ನೊಂದು ಬದಿಯಲ್ಲಿ ನಿಲ್ಲಲು ಸೂಚಿಸಿದ್ದರು ಅಷ್ಟೇ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಅಕ್ಷಯ್ ಹಾಗೂ ತಮ್ಮ ನಡುವಿನ ಬಾಂಧವ್ಯ, ಜೊತೆಯಾಗಿ ಕೆಲಸ ಮಾಡಿದ್ದೆಲ್ಲವನ್ನೂ ರಾಜ್ಪಾಲ್ ನೆನೆಪಿಸಿಕೊಂಡಿದ್ದಾರೆ.
ರಾಜ್ಪಾಲ್ ಯಾದವ್ ಮತ್ತು ಅಕ್ಷಯ್ ಕುಮಾರ್ ಹೇರಾ ಫೆರಿ, ಭಾಗಮ್ ಭಾಗ್, ಭೂಲ್ ಭುಲೈಯಾ, ಮುಜ್ಸೆ ಶಾದಿ ಕರೋಗಿ, ಖಟ್ಟಾ ಮೀಠಾ ಸೇರಿ ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು.
ಅಕ್ಷಯ್ ಕುಮಾರ್ ಮತ್ತು ರಾಜ್ಪಾಲ್ ಯಾದವ್ ಅಭಿನಯದ ಭೂತ್ ಬಂಗ್ಲಾ ಚಿತ್ರ ಏಪ್ರಿಲ್ 10 ರಂದು ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಪ್ರಿಯದರ್ಶನ್ ನಿರ್ದೇಶನ ಮಾಡಿದ್ದು, ತಬು ಮತ್ತು ವಾಮಿಕಾ ಗಬ್ಬಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.



