ವಾರಣಾಸಿಯ ತದ್ರೂಪ ಸೃಷ್ಟಿಸಿದ ರಾಜಮೌಳಿ : ಸಖತ್ತಾಗಿದೆ ಫಿಲಂ ಸೆಟ್
ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ನಿರ್ದೇಶಕ ರಾಜಮೌಳಿ ಅವರು ಈಗ `ವಾರಣಾಸಿ’ ಎಂಬ ಮತ್ತೊಂದು ಪ್ರಾಜೆಕ್ಟ್‌ನಲ್ಲಿ ಬ್ಯುಸಿ ಇದ್ದಾರೆ. ಸದ್ಯ ವಾರಣಾಸಿ ಚಿತ್ರ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಇದಕ್ಕೆ ಕಾರಣ ರಾಜಮೌಳಿ ಅವರು ಹಂಚಿಕೊಂಡಿರುವ ಫೋಟೋ.
Peak Detailing 🫡#SSRajamouli #MaheshBabu #Varanasi pic.twitter.com/ij3yWSVbzi
— SS Rajamouli Fan Club (@ssrajamouliFC) March 24, 2026
ಹೌದು, ನಿರ್ದೇಶಕ ರಾಜಮೌಳಿ ವಾರಣಾಸಿ ಚಿತ್ರಕ್ಕಾಗಿ ಅಸಲಿ ವಾರಣಾಸಿಯ ತದ್ರೂಪವನ್ನು ಸೃಷ್ಟಿಸಿದ್ದಾರೆ. ಅಸಲಿ ವಾರಣಾಸಿಯನ್ನೇ ಹೋಲುವ ಈ ಸೆಟ್‌ನ ಚಿತ್ರ ಸಹಜವಾಗಿಯೇ ನೆಟ್ಟಿಗರ ಗಮನ ಸೆಳೆದಿದೆ. ಪ್ರತಿಯೊಂದು ಅಂಶವನ್ನೂ ಸೂಕ್ಷ್ಮವಾಗಿ ಗಮನದಲ್ಲಿಟ್ಟುಕೊಂಡು ಈ ಸೆಟ್ ನಿರ್ಮಿಸಲಾಗಿದೆ. ವಾರಣಾಸಿಯ ಘಾಟ್‌ಗಳು, ದೇವಾಲಯಗಳು, ಹಳ್ಳಿಗಾಡಿನ ನಗರದ ಬೀದಿಗಳನ್ನು ಇಲ್ಲಿ ಮರುಸೃಷ್ಟಿಸಲಾಗಿದೆ.
(2/3) pic.twitter.com/pA0CM6dm4e
— DiscussingFilm (@DiscussingFilm) March 24, 2026
(2/3) pic.twitter.com/pA0CM6dm4e
— DiscussingFilm (@DiscussingFilm) March 24, 2026
ಈ ಚಿತ್ರದಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಬಿಗ್ ಬಜೆಟ್ ಅದ್ಧೂರಿ ಚಿತ್ರವಾಗಿದೆ. ಇದರಲ್ಲಿ ಮಹೇಶ್ ಬಾಬು ರುದ್ರ ಮತ್ತು ಭಗವಾನ್ ರಾಮನಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಿಯಾಂಕಾ ಮಂದಾಕಿನಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ನಟ ಪೃಥ್ವಿರಾಜ್ ಸುಕುಮಾರನ್ ಕುಂಭನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.



