ಗಾಯಗೊಂಡಿದ್ದ ನಟನಿಗೆ ಚಿಕಿತ್ಸೆ ನೀಡಲು ಬಂದಿದ್ದ ಡಾಕ್ಟರ್ : 3 ದಿನದಲ್ಲಿ ಅದೇ ಸಿನಿಮಾದಲ್ಲಿ ಆ್ಯಕ್ಟರ್! : ಧುರಂಧರ್ ಕಥೆ ಇದು
ಗಾಯಗೊಂಡಿದ್ದ ನಟನಿಗೆ ಚಿಕಿತ್ಸೆ ನೀಡಲು ಬಂದಿದ್ದ ಡಾಕ್ಟರ್ ಒಬ್ಬರು ಬಳಿಕ ಅದೇ ಸಿನಿಮಾದಲ್ಲಿ ನಟನಾಗಿ ಬಣ್ಣ ಹಚ್ಚಿದ್ದಾರೆ…! ಧುರಂಧರ್ : ದಿ ರಿವೇಂಜ್ ಚಿತ್ರ ಇಂತಹ ವೈಶಿಷ್ಟ್ಯಪೂರ್ಣ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಪಂಜಾಬ್‍ನ ಲೂಧಿಯಾನದ ಡಾ. ಸನ್ನಿ ಅಶೋಕ್ ಅವರ ಕಥೆ ಇದು.
2025ರ ಜುಲೈ 8ರಂದು ಪಂಜಾಬ್‍ನ ಲೂಧಿಯಾನದಲ್ಲಿ ಧುರಂಧರ್ 2 ಚಿತ್ರೀಕರಣದ ಸಂದರ್ಭದಲ್ಲಿ ನಟ ಅರ್ಜುನ್ ರಾಂಪಾಲ್ ಅವರ ತಲೆಗೆ ಗಾಯವಾಗಿತ್ತು. ಈ ವೇಳೆ ಅರ್ಜುನ್ ರಾಂಪಾಲ್ ಅವರಿಗೆ ಚಿಕಿತ್ಸೆ ನೀಡಲು ಬಂದಿದ್ದು ಕಲಾಖ್ ಹಳ್ಳಿಯಲ್ಲಿರುವ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ನಿಯೋಜನೆಗೊಂಡಿದ್ದ ಇದೇ ಡಾ. ಸನ್ನಿ ಅಶೋಕ್. ಇಲ್ಲಿ ಚಿಕಿತ್ಸೆ ನೀಡಿದ ಬಳಿಕ ಡಾ ಸನ್ನಿ ಅಶೋಕ್ ರಣವೀರ್ ಸಿಂಗ್ ಅವರೊಂದಿಗೆ ಫೋಟೋ ತೆಗೆಯಲು ಬಯಸಿದ್ದರು. ಆಗ ರಣವೀರ್ ತಮಾಷೆಗಾಗಿ `ನಾವು ನಿಮ್ಮನ್ನು ಚಿತ್ರದಲ್ಲಿ ಸೇರಿಸಿಕೊಳ್ಳುತ್ತೇವೆ’ ಎಂದು ಹೇಳಿದ್ದರು. ಇದಾದ ಮೂರು ದಿನಗಳಲ್ಲಿ ಡಾ.ಸನ್ನಿ ಅವರನ್ನು ಈ ಧುರಂಧರ್ 2 ಚಿತ್ರದಲ್ಲಿ ನಟಿಸುವಂತೆ ಮಾಡಲಾಗಿತ್ತು.
View this post on Instagram
ಪಂಜಾಬ್‍ನ ವಿವಿಧ ಭಾಗಗಳಲ್ಲಿ ಧುರಂಧರ್ 2 ಚಿತ್ರೀಕರಣ ನಡೆದಿದೆ. 2025ರ ಜುಲೈ 8ರಂದು ಲೂಧಿಯಾನದ ಬಳಿಯ ರೈಲ್ವೇ ಹಳಿಯಲ್ಲಿ ಚಿತ್ರೀಕರಿಸುತ್ತಿದ್ದ ಚೇಸ್ ಸೀಕ್ವೆನ್ಸ್ ನಲ್ಲಿ ಅರ್ಜುನ್ ರಾಂಪಾಲ್ ತಲೆಗೆ ಗಾಯವಾಗಿತ್ತು. ಆಗ ಚಿಕಿತ್ಸೆಗಾಗಿ ಡಾ ಸನ್ನಿ ಅಶೋಕ್ ಅವರನ್ನು ಧುರಂಧರ್ ಸೆಟ್‍ಗೆ ಕರೆಸಲಾಗಿತ್ತು. ಇದಾದ ಬಳಿಕ ಜುಲೈ 11 ರಂದು ಇವರನ್ನು ಶಾಹ್ನೆವಾಲ್ ವಿಮಾನ ನಿಲ್ದಾಣದಲ್ಲಿ ಚಿತ್ರೀಕರಣಕ್ಕಾಗಿ ಕರೆಸಿಕೊಳ್ಳಲಾಗಿತ್ತು. ಗಾಯಗೊಂಡ ರಣವೀರ್ ಸಿಂಗ್ ಅವರು ಇಳಿಯುವಾಗ ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾದ ದೃಶ್ಯದ ಅಗತ್ಯವಿದೆ ಎಂದು ಆದಿತ್ಯ ಧರ್ ಸ್ಥಳದಲ್ಲೇ ವಿವರಿಸಿದರು. ಚಿತ್ರದ ಚಿತ್ರೀಕರಣದ ಸಮಯದಲ್ಲಿ ತಮ್ಮ ಅದ್ಭುತ ಕ್ಷಣಗಳನ್ನು ಹಂಚಿಕೊಂಡ ಡಾ. ಅಶೋಕ್, `ಎಲ್ಲಾ ಚಿತ್ರತಂಡ – ವಿಶೇಷವಾಗಿ ರಣವೀರ್ ಮತ್ತು ಅರ್ಜುನ್ ರಾಂಪಾಲ್ ತುಂಬಾ ಸರಳ ಮತ್ತು ಸ್ನೇಹಪರರಾಗಿದ್ದರು’ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
Dr. Sunny Ashok, a government doctor from Pakhowal, Ludhiana, was called to treat Arjun Rampal's head injury during a high-energy chase scene for Dhurandhar 2: The Revenge. Just three days later, while filming at Shahnewal Airport, Ranveer Singh jokingly suggested the doctor… pic.twitter.com/CW7vuB7D8p
— Sacred Bharat (@sacredbharat_) March 25, 2026
ಈ ಚಿತ್ರದಲ್ಲಿ ಅರ್ಜುನ್ ರಾಂಪಾಲ್ ಐಎಸ್‍ಐ ಏಜೆಂಟ್ ಮೇಜರ್ ಇಕ್ಬಾಲ್ ಪಾತ್ರವನ್ನು ನಿರ್ವಹಿಸಿದ್ದಾರೆ.



