News Roundup

ಏಪ್ರಿಲ್ 4 : ಆತ್ಮಿ ಶೆಟ್ಟಿ ಅವರ ಭರತನಾಟ್ಯ ರಂಗ ಪ್ರವೇಶ

ವರದಿ : ಯಾದವ ಅಗ್ರಬೈಲ್, ಬಿ.ಸಿ.ರೋಡ್

ಬಂಟ್ವಾಳ : ಕಲ್ಲಡ್ಕದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ) ಭರತನಾಟ್ಯ ಸಂಸ್ಥೆಯ ವಿದ್ಯಾರ್ಥಿನಿ ಕುಮಾರಿ ಆತ್ಮಿ ಶೆಟ್ಟಿ ಅವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮವು ಇದೇ ಬರುವ ಏಪ್ರಿಲ್ 04 ರ ಸಂಜೆ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಲಿದೆ.

ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ನೃತ್ಯಗುರು ವಿದುಷಿ ವಿದ್ಯಾಮನೋಜ್, 12 ವರ್ಷಗಳಿಂದ ನನ್ನ ಬಳಿ ಭರತನಾಟ್ಯಾಭ್ಯಾಸ ಮಾಡುತ್ತಿರುವ ಆತ್ಮಿ ಶೆಟ್ಟಿ ಯವರು ವಿದ್ವತ್ ಅಂತಿಮ ಪರೀಕ್ಷೆಯ ತಯಾರಿಯಲ್ಲಿದ್ದಾರೆ. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನೃತ್ಯಗುರು ಶಾಂತಲಾ ಪ್ರಶಸ್ತಿ ಪುರಸ್ಕøತರಾದ ಉಳ್ಳಾಲ ಮೋಹನ್ ಕುಮಾರ್, ಪುತ್ತೂರು ವಿಶ್ವಕಲಾನಿಕೇತನ ಸಂಸ್ಥೆಯ ನಿರ್ದೇಶಕಿ ಗುರು ವಿದುಷಿ ನಯನ ವಿ.ರೈ, ನೃತ್ಯಗಿರಿ ಮೈಸೂರು ಭರತನಾಟ್ಯ ಸಂಸ್ಥೆಯ ನಿರ್ದೇಶಕರಾದ ಡಾ. ಕೃಪಾ ಪಡ್ಕೆ, ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಪಟ್ಲ ಸತೀಶ್ ಶೆಟ್ಟಿ, ಉದ್ಯಮಿ ಚಂದ್ರಹಾಸ ಡಿ. ಶೆಟ್ಟಿ ಇವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಹಿಮ್ಮೇಳ ಕಲಾವಿದರಾಗಿ ನಟುವಾಂಗದಲ್ಲಿ ಗುರು ವಿದುಷಿ ಶ್ರೀಮತಿ ವಿದ್ಯಾ ಮನೋಜ್, ಹಾಡುಗಾರಿಕೆಯಲ್ಲಿ ವಿದ್ವಾನ್ ನಂದಕುಮಾರ್ ಉನ್ನಿಕೃಷ್ಣನ್ ಬೆಂಗಳೂರು, ಮೃದಂಗ ವಾದನದಲ್ಲಿ ವಿದ್ವಾನ್ ಕಾರ್ತಿಕ್ ವೈದಾತ್ರಿ ಬೆಂಗಳೂರು, ಕೊಳಲು ವಾದನದಲ್ಲಿ ವಿದ್ವಾನ್ ನಿತೀಶ್ ಅಮ್ಮಣ್ಣಾಯ ಬೆಂಗಳೂರು, ವೀಣಾ ವಾದನದಲ್ಲಿ ವಿದ್ವಾನ್ ಗೋಪಾಲ್ ವೆಂಕಟರಮಣ ಬೆಂಗಳೂರು ಇವರು ಸಹಕರಿಸಲಿದ್ದಾರೆ ಎಂದು ಅವರು ವಿವರಿಸಿದರು

ಭರತನಾಟ್ಯ ವಿದ್ಯಾರ್ಥಿನಿ ಕು.ಆತ್ಮಿಶೆಟ್ಟಿ ಮಾತನಾಡಿ, ನನ್ನ ರಂಗಪ್ರವೇಶ ನನ್ನ ಹೆತ್ತವರ ಕನಸು, ಗುರುಗಳ ಪೆÇ್ರೀತ್ಸಾಹ ಮತ್ತು ಪ್ರೇರಣೆಯಿಂದ ರಂಗಪ್ರವೇಶಕ್ಕೆ ಅಣಿಯಾಗಿದ್ದೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉದಯ ಕುಮಾರ್ ಶೆಟ್ಟಿ , ಶಾಲಿನಿ ಶೆಟ್ಟಿ, ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button