BollywoodSpecial Desk
ಧುರಂಧರ್ನ `ಅಜಯ್ ಸನ್ಯಾಲ್’ ಯಾರು? : `ಭಾರತದ ಜೇಮ್ಸ್ ಬಾಂಡ್’ ಬಗೆಗಿನ ಅಪರೂಪದ ಸಂಗತಿಗಳು

ಬಾಲಿವುಡ್ನ ಸ್ಪೈ ಥ್ರಿಲ್ಲರ್ ಧುರಂಧರ್ ಸರಣಿ ಬಾಕ್ಸ್ ಆಫೀಸ್ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ಖ್ಯಾತ ನಟ ಮಾಧವನ್ `ಅಜಯ್ ಸನ್ಯಾಲ್’ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೇ ಈ ಪಾತ್ರಕ್ಕೆ ಸ್ಫೂರ್ತಿ, ಜೀವಾಳ.

ಅಜಿತ್ ಕುಮಾರ್ ದೋವಲ್ ಭಾರತದ ಜೇಮ್ಸ್ ಬಾಂಡ್ ಎಂದೇ ಖ್ಯಾತಿ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಮೂರನೇ ಅವಧಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಇವರು ನೇಮಗೊಂಡಿದ್ದಾರೆ. ಅಜಿತ್ ದೋವಲ್ ಬಗೆಗಿನ ಕೆಲ ಅಪರೂಪದ ಮಾಹಿತಿ ಈ ವಿಡಿಯೋದಲ್ಲಿದೆ…



