ಧುರಂಧರ್ 2 ಚಿತ್ರವನ್ನು ಹೊಗಳುತ್ತಲೇ ಆದಿತ್ಯ ಧರ್‌ಗೆ `ಕಿವಿಮಾತು’ ಹೇಳಿದ ಕಾಶ್ಮೀರ ಫೈಲ್ಸ್ ಡೈರೆಕ್ಟರ್ ವಿವೇಕ್ ಅಗ್ನಿಹೋತ್ರಿ
ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧರ್ ನಿರ್ದೇಶನದ ಧುರಂಧರ್ 2 ಸಿನಿಮಾ ಸಾವಿರ ಕೋಟಿ ರೂಪಾಯಿ ಬಾಚಿಕೊಂಡು ಮುನ್ನುಗ್ಗುತ್ತಿದೆ. ಸಾಕಷ್ಟು ಮಂದಿ ಈ ಚಿತ್ರವನ್ನು ಹೊಗಳಿದ್ದಾರೆ. ಇದೀಗ ಈ ಸಾಲಿಗೆ ದಿ ಕಾಶ್ಮೀರ ಫೈಲ್ಸ್, ದಿ ಕೇರಳ ಸ್ಟೋರಿಯಂತಹ ಚಿತ್ರಗಳನ್ನು ನೀಡಿರುವ ವಿವೇಕ್ ಅಗ್ನಿಹೋತ್ರಿ ಅವರು ಕೂಡಾ ಸೇರಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿವೇಕ್ ಅಗ್ನಿಹೋತ್ರಿ, ನಿರ್ದೇಶಕ ಆದಿತ್ಯ ಧರ್ ಅವರಿಗೆ `ಈ ಇಕೋ ಸಿಸ್ಟಮ್ ಬಗ್ಗೆ ಎಚ್ಚರದಿಂದ ಇರಿ’ ಎಂದೂ ಕಿವಿಮಾತು ಹೇಳಿದ್ದಾರೆ.
Dhurandhar: The Revenge
I was in the countryside of California, finally made a trip to LA just to watch Dhurandhar.
Shabash. Bravo. Brilliant once again, @AdityaDharFilms. I genuinely don’t know what to say… anything I add may only become noise over something that already…
— Vivek Ranjan Agnihotri (@vivekagnihotri) March 30, 2026
`ನಾನು ಕ್ಯಾಲಿಫೋರ್ನಿಯಾದಲ್ಲಿದ್ದೆ, ಕೊನೆಗೂ ಧುರಂಧರ್ ನೋಡಲು ಎಲ್‌ಎಗೆ ಬಂದಿದ್ದೇನೆ. ಶಹಬ್ಬಾಸ್ ಬ್ರೇವೋ. ಮತ್ತೊಮ್ಮೆ ಅದ್ಭುತ, ಆದಿತ್ಯ ಧರ್, ನನಗೆ ನಿಜವಾಗಿಯೂ ಏನು ಹೇಳಬೇಕೆಂದು ತಿಳಿಯುತ್ತಿಲ್ಲ. ಈ ಚಿತ್ರದಲ್ಲಿ ಪ್ರತಿಯೊಬ್ಬರೂ ಅಸಾಧಾರಣವಾಗಿ ಕೆಲಸ ಮಾಡಿದ್ದಾರೆ. ಆದರೆ ಈ ಚಿತ್ರವನ್ನು ಇನ್ನೂ ಹೆಚ್ಚಿನದಕ್ಕೆ ಏರಿಸುವ ಎರಡು ಕಡಿಮೆ ಗುರುತಿಸಲ್ಪಟ್ಟ ಪ್ರತಿಭೆಗಳನ್ನು ನಾನು ನಿರ್ದಿಷ್ಟವಾಗಿ ಗುರುತಿಸಲು ಬಯಸುತ್ತೇನೆ:
1. ವಿಕಾಶ್ ನೌಲಖಾ ಅವರ ವಿಶ್ವ ದರ್ಜೆಯ ಛಾಯಾಗ್ರಹಣ ಮತ್ತು 2. ಸೈನಿ ಜೋಹ್ರೇ ಅವರ ಅಸಾಧಾರಣ ನಿರ್ಮಾಣ ವಿನ್ಯಾಸ.
ಸಿನೆಮಾದಲ್ಲಿ, ಕ್ಯಾಮೆರಾ ಮತ್ತು ನಿರ್ಮಾಣ ವಿನ್ಯಾಸವು ಪರಸ್ಪರ ಸಂಬಂಧ ಹೊಂದಿವೆ. ಎರಡೂ ಸಂಪೂರ್ಣ ಸಾಮರಸ್ಯದಿಂದ ಇಲ್ಲದಿದ್ದರೆ, ಒಂದು ಚಿತ್ರವು ಒಂದು ಮೇರುಕೃತಿಯ ಮಟ್ಟಕ್ಕೆ ಏರಲು ಸಾಧ್ಯವಿಲ್ಲ. ಧುರಂಧರ್‌ನಲ್ಲಿ, ನಾವು ನೋಡುವುದು ಶುದ್ಧ ಸಿನರ್ಜಿ. ವಿಕಾಶ್ ಮತ್ತು ಸೈನಿ ಜೋಹ್ರೇ ಇಬ್ಬರೂ ಅದ್ಭುತ ಕೆಲಸವನ್ನು ಮಾಡಿದ್ದಾರೆ. ದೀರ್ಘಕಾಲದವರೆಗೆ ಮಾನದಂಡವಾಗಿ ನಿಲ್ಲುವ ಕೆಲಸ ಅದು. ನಿಮ್ಮಿಬ್ಬರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು ಮತ್ತು ಆದಿತ್ಯ, ಅನುಭವದ ಆಧಾರದಲ್ಲಿ ಒಂದು ಮಾತು; ನೀವು ಚುರುಕು, ಮತ್ತು ನಿಮ್ಮ ಹಾದಿಯನ್ನು ನೀವು ತಿಳಿದಿದ್ದೀರಿ. ಇಲ್ಲಿನ ಎಕೋ ಸಿಸ್ಟಮ್ ಬಗ್ಗೆ ಎಚ್ಚರವಿರಲಿ, ಅದು ಎಷ್ಟು ಆಕರ್ಷಕವಾಗಿರುತ್ತದೋ ಅಷ್ಟೇ ಕೆಟ್ಟದೂ ಆಗಿರಬಹುದು. ಮತ್ತು #TeamDhurandhar ನಲ್ಲಿರುವ ಉಳಿದವರೆಲ್ಲರೂ, ನೀವು ಅದ್ಭುತರು’ ಎಂದು ಅಗ್ನಿಹೋತ್ರಿ ಬರೆದುಕೊಂಡಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಸದ್ಯ ಆಪರೇಷನ್ ಸಿಂದೂರ್ ಅನ್ನು ತೆರೆಗೆ ತರುವ ಹುಮ್ಮಸ್ಸಿನಲ್ಲಿದ್ದಾರೆ. ಈ ಬಗೆಗಿನ ಕೆಲಸಗಳು ಆರಂಭವಾಗಿದೆ.



