Bollywood

ತಮ್ಮ ಫಿಟ್ನೆಸ್ ಮಂತ್ರ ಹಂಚಿಕೊಂಡ ಅನಿಲ್ ಕಪೂರ್ : ಹಿರಿಯ ನಟನಿಂದ ಸ್ಥಿರತೆಯ ಪಾಠ

ಬಾಲಿವುಡ್ ನಟ ಅನಿಲ್ ಕಪೂರ್ ಈಗಲೂ ಯುವಕರು ನಾಚುವಂತಹ ಫಿಟ್ನೆಸ್ ಹೊಂದಿದ್ದಾರೆ. ಈ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡುತ್ತಾರೆ. ಇಂತಹ ಅನಿಲ್ ಕಪೂರ್‌ ಈಗ ತಮ್ಮ ಫಿಟ್ನೆಸ್ ಮಂತ್ರವನ್ನು ಹಂಚಿಕೊಂಡಿದ್ದಾರೆ. ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡ ಅನಿಲ್ ಕಪೂರ್ `ಸ್ಥಿರತೆಯ’ ಬಗ್ಗೆ ಒತ್ತಿ ಹೇಳಿದ್ದಾರೆ.

`ಬದುಕಿನಲ್ಲಿ ಅತ್ಯಂತ ಬಲಶಾಲಿ ಶಕ್ತಿಗಳಲ್ಲಿ ಒಂದು ಸ್ಥಿರತೆ. ಯಾವುದೇ ಒಂದನ್ನು ಪದೇ ಪದೇ ಪುನರಾವರ್ತಿಸಲು ಸಾಧ್ಯವಾಗುವುದು. ನೀವು ದೊಡ್ಡ ಹೆಜ್ಜೆಯನ್ನು ಇಡುವಂತೆ, ನೀವು ದೊಡ್ಡ ಫಲಿತಾಂಶವನ್ನು ಪಡೆಯುವಂತೆ, ನೀವು ದೇಹವನ್ನು ನಿರ್ಮಿಸಿದಂತೆ. ನೀವು ವ್ಯವಹಾರವನ್ನು ಕಟ್ಟಿದಂತೆ. ಸ್ಥಿರತೆ ಎನ್ನುವುದು ನಿತ್ಯದ ಸಣ್ಣ ಗೆಲುವಾಗಿದೆ’ ಎಂಬ ಧ್ವನಿಯುಳ್ಳ ವಿಡಿಯೋವನ್ನು ಅನಿಲ್ ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by anilskapoor (@anilskapoor)


ಯಾವುದೇ ಸಂಗತಿಯನ್ನು ಸಾಧಿಸಲು ತಾಳ್ಮೆ, ಪರಿಶ್ರಮ, ಸ್ಥಿರತೆ ಮುಖ್ಯ ಎಂಬುದನ್ನು ಅನಿಲ್ ಕಪೂರ್ ಒತ್ತಿ ಹೇಳಿದ್ದಾರೆ. ಬಲವಾದ ದೇಹವನ್ನು ಅಥವಾ ಸ್ಥಿತಿಸ್ಥಾಪಕ ಮನಸ್ಥಿತಿಯನ್ನು ನಿರ್ಮಿಸಲು ಸ್ಥಿರವಾದ ಪ್ರಯತ್ನ ಅಗತ್ಯ ಎಂಬುದು ಇವರ ಈ ಮಾತಿನ ತಾತ್ಪರ್ಯ.

Show More

Related Articles

Leave a Reply

Your email address will not be published. Required fields are marked *

Back to top button