News Roundup

ಮೂರು ಪರೀಕ್ಷೆ ಮುಗಿಯುವಾಗ ಅಮ್ಮನ ಅಗಲಿಕೆ : ಕಾಡುವ ನೋವಿನಲ್ಲೂ ಧೃತಿಗೆಡದೆ ಸಾಧನೆ ಮಾಡಿದ ಆಳ್ವಾಸ್ ವಿದ್ಯಾರ್ಥಿನಿ ದಿಶಾ

ಮೂಡುಬಿದಿರೆ : ಒಂದು ಕಡೆ ಪರೀಕ್ಷೆ ನಡೆಯುತ್ತಿರುವಾಗಲೇ ಅಮ್ಮನನ್ನು ಕಳೆದುಕೊಂಡ ದುಃಖ… ಮತ್ತೊಂದೆಡೆ ಅಮ್ಮನ ಕನಸಿನಂತೆ ಸಾಧನೆ ಮಾಡಬೇಕೆಂಬ ಹಂಬಲ… ಆ ಕ್ಷಣದಲ್ಲಿ ಆ ಹೃದಯ ಪಟ್ಟ ವೇದನೆಯೆಷ್ಟೋ, ಸುರಿಸಿದ ಕಣ್ಣೀರೆಷ್ಟೋ…! ಆದರೂ ಧೃತಿಗೆಡದೆ ಹೆಜ್ಜೆ ಹಾಕಿದಳು… ಅಮ್ಮನ ಆಸೆ ಈಡೇರಿಸಬೇಕು, ಸಾಧಿಸಬೇಕೆಂಬ ಗುರಿ ಮಾತ್ರ ಕಣ್ಣೆದುರು ಇತ್ತು… ಈ ಧೃಡ ಸಂಕಲ್ಪ ಈಗ ಫಲ ಕೊಟ್ಟಿದೆ… ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆ ಸಾಧಕಿ ರಾಜ್ಯಕ್ಕೇ ಪ್ರಥಮ ಬಂದಿದ್ದಾಳೆ…!

ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ದಿಶಾ ಸಾಧನೆಯ ಪಯಣದ ಕಥೆ ಇದು. ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಗಳಿಸಿ ದಿಶಾ ರಾಜ್ಯಕ್ಕೇ ಪ್ರಥಮ ಬಂದು ಸಾಧನೆ ಮಾಡಿದ್ದಾರೆ.

ಮೂರು ಪರೀಕ್ಷೆಗಳು ಮುಗಿದಿದ್ದಾಗ ಅಮ್ಮನನ್ನು ಕಳೆದುಕೊಂಡಿದ್ದ ದಿಶಾ, ಆ ನೋವಿನ ನಡುವೆಯೂ ಪರೀಕ್ಷೆಯೆಡೆಗೆ ಗಮನ ಹರಿಸಿದ್ದರು. ಅಮ್ಮನ ಆಸೆಯೂ ಮಗಳು ಚೆನ್ನಾಗಿ ಓದಬೇಕೆಂಬುದಾಗಿತ್ತು. ಹೀಗಾಗಿ ಅಮ್ಮನ ಅಗಲಿಕೆಯ ನೋವಿನ ನಡುವೆಯೂ ಶ್ರಮಪಟ್ಟು ಓದಿದ ದಿಶಾ ಈಗ ತಾಯಿಯ ಕನಸನ್ನು ನನಸು ಮಾಡಿದ್ದಾರೆ. ಮುಂದೆ ಸಿಎ ಮಾಡುವ ಗುರಿ ಇವರದ್ದು. ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ದಿಶಾ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಅವರು ಕೊಂಡಾಡಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button