Bollywood
ಧುರಂಧರ್ 2 : ಸಂಜಯ್ ದತ್ ಅಭಿನಯಕ್ಕೆ ರಾಘವ್ ಛಡ್ಡಾ ಫಿದಾ
ಆದಿತ್ಯ ಧರ್ ನಿರ್ದೇಶನದ ಧುರಂಧರ್ ಸಿನಿಮಾದಲ್ಲಿ ಸಂಜಯ್ ದತ್ ಪಾಕಿಸ್ತಾನದ ಪೊಲೀಸ್ ಅಧಿಕಾರಿ ಚೌಧರಿ ಅಸ್ಲಾಮ್ ಪಾತ್ರವನ್ನು ನಿರ್ವಹಿಸಿದ್ದರು. ಈ ಪಾತ್ರವನ್ನು ಸಂಜಯ್ ದತ್ ಅದ್ಭುತವಾಗಿ ನಿಭಾಯಿಸಿದ್ದರು. ಇದೀಗ ರಾಜಕಾರಣಿ ರಾಘವ್ ಛಡ್ಡಾ ಕೂಡಾ ಸಂಜಯ್ ಅಭಿನಯವನ್ನು ಶ್ಲಾಘಿಸಿದ್ದಾರೆ.
ಇತ್ತೀಚೆಗೆ ರಾಘವ್ ಛಡ್ಡಾ ನಿವಾಸಕ್ಕೆ ಸಂಜಯ್ ದತ್ ಆಗಮಿಸಿದ್ದರು. ಈ ಫೋಟೋಗಳನ್ನು ಈಗ ಹಂಚಿಕೊಂಡಿರುವ ರಾಘವ್ ಛಡ್ಡಾ, `ಕೆಲವು ಸಮಯದ ಹಿಂದೆ ನನ್ನ ಮನೆಯಲ್ಲಿ, ನನಗೆ ತಿಳಿದಿರುವ ಅತ್ಯಂತ ಪ್ರೀತಿಯ ವ್ಯಕ್ತಿಗಳಲ್ಲಿ ಒಬ್ಬರಾದ ಸಂಜಯ್ ದತ್ ಅವರನ್ನು ಆತಿಥ್ಯ ವಹಿಸುವ ಸಂತೋಷ ಸಿಕ್ಕಿತು. `ಧುರಂಧರ್’ ಬಗ್ಗೆ ನಿಮ್ಮೆಲ್ಲರ ಪ್ರೀತಿಯನ್ನು ನೋಡಿ ತುಂಬಾ ಸಂತೋಷವಾಯಿತು’ ಎಂದು ಬರೆದುಕೊಂಡಿದ್ದಾರೆ.
View this post on Instagram
`ಧುರಂಧರ್: ದಿ ರಿವೆಂಜ್’ ನಲ್ಲಿ, ಸಂಜಯ್ ದತ್ ಅವರು ನಿಜ ಜೀವನದ ಪಾಕಿಸ್ತಾನಿ ಪೆÇಲೀಸ್ ಅಧಿಕಾರಿಯಿಂದ ಸ್ಫೂರ್ತಿ ಪಡೆದ ಎಸ್ಪಿ ಚೌಧರಿ ಅಸ್ಲಾಮ್ ಪಾತ್ರವನ್ನು ನಿರ್ವಹಿಸಿದ್ದಾರೆ.



