Bollywood
ದಕ್ಷಿಣದ ನಿರ್ದೇಶಕರೊಬ್ಬರು ತನ್ನನ್ನು ಕೆಟ್ಟದಾಗಿ ಮುಟ್ಟಿದ್ದರು : ನಟಿ ಡೈಸಿ ಶಾ ಆರೋಪ
ಕನ್ನಡದಲ್ಲಿ ಮೂರು ಚಿತ್ರಗಳಲ್ಲಿ ನಟಿಸಿದ್ದ ಬಾಲಿವುಡ್ ನಟಿ ಡೈಸಿ ಶಾ ತಮಗಾದ ಕಾಸ್ಟಿಂಗ್ ಕೌಚ್ ಘಟನೆಯ ಬಗ್ಗೆ ಮತ್ತೆ ನೆನಪು ಮಾಡಿಕೊಂಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ತಮಗಾದ ಅಹಿತಕರ ಅನುಭವವನ್ನು ಬಿಟ್ಟಿದ್ದಾರೆ.
ಮುಂಬೈಯಲ್ಲಿ ನಡೆದಿದ್ದ ಆಡಿಷನ್ನಲ್ಲಿ ದಕ್ಷಿಣ ಭಾರತದ ನಿರ್ದೇಶಕರೊಬ್ಬರು ನನ್ನನ್ನು ಕೆಟ್ಟದಾಗಿ ಮುಟ್ಟಿದ್ದರು ಎಂದು ಆರೋಪಿಸಿದ್ದಾರೆ. ಎಲ್ಲರನ್ನೂ ಪ್ರತ್ಯೇಕವಾಗಿ ಕರೆದಿದ್ದರು. ನನ್ನ ಸರದಿ ಬಂದಾಗ ಅವರು ನನ್ನನ್ನು ಅಸಭವ್ಯವಾಗಿ ಮುಟ್ಟಿದ್ದರು. ನನ್ನ ಕೈಯನ್ನು ಅವರು ಹಿಡಿದುಕೊಂಡಿದ್ದರು. ಈ ವರ್ತನೆಯಿಂದ ನನಗೆ ಬೇಸರವಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.



