Special Desk

ನಿತ್ಯ ಓಂ ಪಠಣದ ಪ್ರಯೋಜನಗಳು ಮತ್ತು ಓಂ ಮಂತ್ರ ಜಪಿಸುವ ಸರಿಯಾದ ವಿಧಾನ

ಹಿಂದೂ ಧರ್ಮದಲ್ಲಿ `ಓಂ’ ಮಂತ್ರಕ್ಕೆ ಬಲು ಮಹತ್ವವಿದೆ. ಇದು ಬ್ರಹ್ಮಾಂಡದ ಪವಿತ್ರ ಸಂಕೇತ, ಶಬ್ದ ಹಾಗೂ ಮಂತ್ರವಾಗಿದೆ. ಓಂ ಅನ್ನು ಬ್ರಹ್ಮಾಂಡದ ಮೊದಲ ಶಬ್ದ ಎಂದು ಅನೇಕ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ನಿತ್ಯ ಓಂ ಪಠಣ ಮನಸ್ಸನ್ನು ಶಾಂತಗೊಳಿಸಲು, ನಕಾರಾತ್ಮಕ ಶಕ್ತಿಗಳನ್ನು ಕಡಿಮೆ ಮಾಡಲು, ಆಂತರಿಕ ಶಾಂತಿ ತರಲು ಸಹಾಯಕ ಎಂದೂ ಹೇಳಲಾಗುತ್ತದೆ.

ನಿತ್ಯ ಓಂ ಪಠಣದ ಪ್ರಯೋಜನಗಳು ಇಲ್ಲಿವೆ…

  • ನಿತ್ಯ ಓಂ ಅನ್ನು ಒಪಿಸುವುದು ಒಬ್ಬರನ್ನು ದೈವಿಕ ಅಥವಾ ಉನ್ನತ ಶಕ್ತಿಯೊಂದಿಗೆ ಜೋಡಿಸುತ್ತದೆ ಎನ್ನುವ ನಂಬಿಕೆ ಇದೆ.ಈ ಮಂತ್ರದ ಪಠಣದ ಸಮಯದಲ್ಲಿ ಉತ್ಪತ್ತಿಯಾಗುವ ಕಂಪನಗಳು ನಮ್ಮ ನರಮಂಡಲದ ಮೇಲೆ ಶಾಂತಗೊಳಿಸುವ ಪರಿಣಾಮವನ್ನು ಬೀರುತ್ತವೆ ಎಂದು ಹೇಳಲಾಗುತ್ತದೆ
  • ಶಕ್ತಿಶಾಲಿ ಓಂ ಬೀಜ ಮಂತ್ರವನ್ನು ನಿಯಮಿತವಾಗಿ ಜಪಿಸುವುದು ಒತ್ತಡ, ಆತಂಕದಂತಹ ಭಾವವನ್ನು ಕಡಿಮೆ ಮಾಡುತ್ತದೆ, ಮಾನಸಿಕ ಶಾಂತಿಗೆ ಉತ್ತೇಜಿಸುತ್ತದೆ ಎನ್ನಲಾಗುತ್ತದೆ
  • ಓಂ ಮಂತ್ರದ ಪಠಣಕ್ಕೆ ಹೆಚ್ಚಿನ ಮಟ್ಟದ ಏಕಾಗ್ರತೆ ಮತ್ತು ಮನಸ್ಸಿನ ಉಪಸ್ಥಿತಿಯ ಅಗತ್ಯವಿದೆ. ಹೀಗಾಗಿ ಏಕಾಗ್ರತೆಯಿಂದ ಈ ಪಠಣದ ಅಭ್ಯಾ ಮುಂದುವರಿಸಿದಾಗ ಮಾನಸಿಕ ಸ್ಪಷ್ಟತೆ, ಗಮನ ಕೇಂದ್ರೀಕರಿಸುವ ಸಾಮರ್ಥ್ಯ ವೃದ್ಧಿಗೆ ನೆರವಾಗುತ್ತದೆ
  • ಓಂ ಜಪದಿಂದ ಉತ್ಪತ್ತಿಯಾಗುವ ಶಾಂತಗೊಳಿಸುವ ಕಂಪನಗಳು ನಮ್ಮ ಭಾವನೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ, ಒತ್ತಡ ತಗ್ಗಿಸಲು ಸಹಾಯ ಮಾಡುತ್ತವೆ.
  • ಓಂ ಆಧ್ಯಾತ್ಮಿಕ ಬೆಳವಣಿಗೆ ಹಾಗೂ ಸ್ವಯಂ-ಸಾಕ್ಷಾತ್ಕಾರಕ್ಕೆ ಪ್ರಬಲ ಸಾಧನವಾಗಿದೆ.

ಓಂ ಮಂತ್ರ ಜಪಿಸುವ ಸರಿಯಾದ ಮಾರ್ಗ

  • ಓಂ ಮಂತ್ರ ಪಠಣಕ್ಕೆ ಶಾಂತವಾದ ಸ್ಥಳವನ್ನು ಆರಿಸಿಕೊಳ್ಳಿ
  • ಆರಾಮದಾಯಕವಾಗಿ ಕುಳಿತುಕೊಳ್ಳಿ. ಪದ್ಮಾಸನದಲ್ಲಿ ಕುಳಿತುಕೊಳ್ಳುವುದು ಉತ್ತಮ. ನಿಮ್ಮ ಭಂಗಿಯನ್ನು ನೇರವಾಗಿ ಇರಿಸಿ
  • ಕಣ್ಣುಗಳನ್ನು ಮುಚ್ಚಿ, ಆಳವಾದ ಉಸಿರನ್ನು ತೆಗೆದುಕೊಳ್ಳಿ
  • ನಿಶ್ವಾಸ ಅಥವಾ ಉಸಿರನ್ನು ಹೊರಬಿಡುವಾಗ ಓಂ ಮಂತ್ರವನ್ನು ಜಪಿಸಿ
  • ಮಂತ್ರದ ಕಂಪನಗಳು ನಿಮ್ಮ ಹೊಟ್ಟೆಯಿಂದ ಗಂಟಲಿನವರೆಗೆ ಪ್ರತಿಧ್ವನಿಸಲು ಅನುವು ಮಾಡಿಕೊಡಿ

 

Show More

Related Articles

Leave a Reply

Your email address will not be published. Required fields are marked *

Back to top button