News Roundup

ಭಾರತದ ಮೊದಲ ಉಪಗ್ರಹ ಉಡಾವಣೆ ಆಗಿ 51 ವರ್ಷ

ಅಂತರಿಕ್ಷ ಅಧ್ಯಯನ, ಪ್ರಯೋಗಗಳಲ್ಲಿ ಭಾರತ ಈಗ ತನ್ನದೇ ಆದ ಸಾಧನೆ ಮಾಡಿದೆ. ಈ ವಿಶಾಲವಾದ ಅಂತರಿಕ್ಷ ಸಾಮ್ರಾಜ್ಯದ ಉದಯ ಆಗಿದ್ದು 1975ರ ಏಪ್ರಿಲ್ 19ರಂದು. ಅಂದು ಭಾರತದ ಮೊದಲ ಉಪಗ್ರಹ ಆರ್ಯಭಟ ನಭಕ್ಕೆ ಚಿಮ್ಮಿತ್ತು. ನಾವೂ ನಕ್ಷತ್ರಗಳತ್ತ ಸಾಗಬಹುದು ಎಂಬುದನ್ನು ಸಾಬೀತುಪಡಿಸಿದ ದಿನ ಇದು. ಇದೇ ಕಾರಣದಿಂದ ಏಪ್ರಿಲ್ 19 ಅನ್ನು ಉಪಗ್ರಹ ತಂತ್ರಜ್ಞಾನ ದಿನ ಎಂದು ಆಚರಿಸಲಾಗುತ್ತದೆ.

ಸೀಮಿತ ಸಂಪನ್ಮೂಲಗಳ ಹೊರತಾಗಿಯೂ ಭಾರತ ಅಂದು ಬಾಹ್ಯಾಕಾಶವನ್ನು ಪ್ರವೇಶಿಸಿತ್ತು. ಈ ಉಪಗ್ರಹಕ್ಕೆ ಪ್ರಾಚೀನ ಭಾರತೀಯ ಗಣಿತಜ್ಞ ಮತ್ತು ಖಗೋಳಶಾಸ್ತ್ರಜ್ಞ ಆರ್ಯಭಟನ ಹೆಸರನ್ನು ಇರಿಸಲಾಗಿತ್ತು. ಇದನ್ನು ಅಸ್ಟ್ರಾಖಾನ್ ಒಬ್ಲಾಸ್ಟ್‍ನಲ್ಲಿರುವ ಸೋವಿಯತ್ ರಾಕೆಟ್ ಉಡಾವಣಾ ಮತ್ತು ಅಭಿವೃದ್ಧಿ ತಾಣವಾದ ಕಪುಸ್ಟಿನ್ ಯಾರ್‍ನಿಂದ ಕೊಸ್ಮೊಸ್-3ಎಂ ಉಡಾವಣಾ ವಾಹನವನ್ನು ಬಳಸಿ ಉಡಾವಣೆ ಮಾಡಲಾಗಿತ್ತು.

ಈ ಉಪಗ್ರಹ 1.4 ಮೀಟರ್ ವ್ಯಾಸ ಮತ್ತು 360 ಕಿಲೋಗ್ರಾಂಗಳಷ್ಟು ತೂಗುತ್ತದೆ. ಮೇಲ್ಭಾಗ ಮತ್ತು ಕೆಳಭಾಗವನ್ನು ಹೊರತುಪಡಿಸಿ, ಉಪಗ್ರಹದ ಉಳಿದ ಎಲ್ಲಾ 24 ಮುಖಗಳನ್ನು ಸೌರ ಫಲಕಗಳಿಂದ ಮುಚ್ಚಲಾಗಿತ್ತು. ಆದರೆ ಕಕ್ಷೆಯಲ್ಲಿ ಐದು ದಿನಗಳನ್ನು ಕಳೆದ ನಂತರ, ಆರ್ಯಭಟ ಉಪಗ್ರಹ ವಿದ್ಯುತ್ ವೈಫಲ್ಯ ಅನುಭವಿಸಿದ್ದರಿಂದ ಎಲ್ಲಾ ಪ್ರಯೋಗಗಳನ್ನು ನಿಲ್ಲಿಸಲಾಯಿತು. ವೈಫಲ್ಯದ ನಂತರ ಉಪಗ್ರಹವು ಕೆಲವು ದಿನಗಳವರೆಗೆ ಮಾಹಿತಿಯನ್ನು ರವಾನಿಸುವುದನ್ನು ಮುಂದುವರೆಸಿತ್ತು. ಈ ಅಮೂಲ್ಯ ಮಾಹಿತಿಗಳನ್ನು ಸಂಗ್ರಹಿಸಲಾಗಿತು. ಇದು ವಿಜ್ಞಾನಿಗಳಿಗೆ ಭವಿಷ್ಯದ ಉಪಗ್ರಹ ಅಭಿವೃದ್ಧಿಯಲ್ಲಿ ನಿರ್ಣಾಯಕ ಅನುಭವವನ್ನು ನೀಡಿತ್ತು.

 

Show More

Related Articles

Leave a Reply

Your email address will not be published. Required fields are marked *

Back to top button