ಜವಾನ್ 2 ಚಿತ್ರದ ಮೂಲಕ ಮತ್ತೆ ಒಂದಾಗುತ್ತಿದ್ದಾರಾ ಶಾರೂಖ್ ಮತ್ತು ಅಟ್ಲೀ?
ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಬಾಲಿವುಡ್ನಲ್ಲೂ ತನ್ನ ಛಾಪನ್ನು ಮೂಡಿಸಿದ್ದಾರೆ. 2024ರಲ್ಲಿ ಬಿಡುಗಡೆಯಾದ ಶಾರೂಖ್ ಜೊತೆಗಿನ `ಜವಾನ್’ ಚಿತ್ರ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಜವಾನ್ ಮೂಲಕ ಶಾರೂಖ್ ಬಾಕ್ಸ್ ಆಫೀಸ್ನಲ್ಲಿ ತನ್ನ ಯಶಸ್ಸಿನ ಓಟವನ್ನು ಮುಂದುವರಿಸಿದ್ದರು. ಈ ಬ್ಲಾಕ್ ಬಸ್ಟರ್ ಚಿತ್ರ ವಿಶ್ವಾದ್ಯಂತ 1000 ಕೋಟಿಗೂ ಹೆಚ್ಚು ಗಳಿಸಿತು. ಜೊತೆಗೆ, ಶಾರುಖ್ ಖಾನ್ಗೆ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನೂ ತಂದುಕೊಟ್ಟಿತ್ತು… ಸದ್ಯದ ಮಾಹಿತಿ ಪ್ರಕಾರ ಅಟ್ಲೀ ಹಾಗೂ ಶಾರೂಕ್ ಜವಾನ್ 2 ಚಿತ್ರದ ಮೂಲಕ ಒಂದಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಶಾರೂಖ್ ತಮ್ಮ ಕಿಂಗ್ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರೀಕರಣ ಪೂರ್ಣಗೊಂಡ ಬಳಿಕ ಜವಾನ್ 2 ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಇತ್ತೀಚೆಗಷ್ಟೇ ಚಿತ್ರದ ಸ್ಕ್ರಿಪ್ಟ್ ಕೆಲಸ ಪೂರ್ಣಗೊಂಡಿದೆ ಎಂದೂ ಹೇಳಲಾಗುತ್ತಿದೆ.
ಜವಾನ್ ನಿರ್ದೇಶಕರಾಗಿ ಬಾಲಿವುಡ್ನಲ್ಲಿ ಅಟ್ಲೀಯ ಮೊದಲ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ನಟಿಸಿದ್ದರು. ಬಾಕಿ ಉಳಿದಂತೆ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ ಮತ್ತು ಸುನಿಲ್ ಗ್ರೋವರ್, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದರು.



