ಮೋಹನ್ ಲಾಲ್ ಬಾಯಲ್ಲಿ ಕನ್ನಡದ ಸೂಪರ್ ಹಿಟ್ ಹಾಡು : ಅಮೇರಿಕಾದಲ್ಲಿ ಅಣ್ಣಾವ್ರ ಹಾಡು ಹಾಡಿದ ಮಲಯಾಳಂ ಸೂಪರ್ಸ್ಟಾರ್
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಕನ್ನಡದ ಸೂಪರ್ ಹಿಟ್ ಹಾಡನ್ನು ಹಾಡಿ ಗಮನ ಸೆಳೆದಿದ್ದಾರೆ. ಅಮೇರಿಕಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೋಹನ್ ಲಾಲ್ ಅವರು ವರನಟ ಡಾ.ರಾಜ್ಕುಮಾರ್ ಹಾಗೂ ಮಂಜುಳಾ ಅಭಿನಯದ `ಎರಡು ಕನಸು’ ಚಿತ್ರದ `ಎಂದೆಂದಿಗೂ ನಿನ್ನನ್ನು ಮರೆತು ಬದುಕಿರಲಾರೆ’ ಹಾಡನ್ನು ಹಾಡಿದ್ದಾರೆ.
ಮೋಹನ್ ಲಾಲ್ ಅವರು ಆನಂದಿಸುತ್ತಾ ಅದ್ಭುತವಾಗಿ ಹಾಡುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Malayalam superstar Mohanlal sings Kannada legend Rajkumar’s hit song Endendu Ninnanu Maretu, at an event in the US recently.#mohanlal #drrajkumar #rajkumar #kfi #kannadacinema pic.twitter.com/rF2FYg0BAN
— Bangalore Times (@BangaloreTimes1) April 23, 2026
ವರನಟ ಡಾ.ರಾಜ್ಕುಮಾರ್ ಅವರ ಅಭಿಮಾನಿಯಾಗಿರುವ ಮೋಹನ್ ಲಾಲ್ ಅವರು ಈ ಹಿಂದೆಯೂ ಇದೇ ಹಾಡನ್ನು ನೋಡುತ್ತಾ ಆನಂದಿಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
1974ರಲ್ಲಿ ‘ಎರಡು ಕನಸು’ ಸಿನಿಮಾ ಬಿಡುಗಡೆಯಾಗಿತ್ತು. ರಾಜನ್-ನಾಗೇಂದ್ರ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು. ಎಂದೆಂದೂ ನಿನ್ನನು ಮರೆತು ಹಾಡನ್ನು ಪಿ.ಬಿ. ಶ್ರೀನಿವಾಸ್ ಮತ್ತು ವಾಣಿ ಜಯರಾಮ್ ಅವರು ಹಾಡಿದ್ದರು.



