Bollywood

ಫ್ರೆಂಡ್ ಮದುವೆಯಲ್ಲಿ ಶಾರೂಖ್ ಪುತ್ರನ `ಹೋರಾಟ’ : ಆದರೆ ಇದು ಘರ್ಷಣೆಯಲ್ಲ, ತಮಾಷೆ

ಶಾರೂಖ್ ಪುತ್ರ ಆರ್ಯನ್ ಖಾನ್ ತನ್ನ ಫ್ರೆಂಡ್ ಮದುವೆಯಲ್ಲಿ ಖುಷಿಯಿಂದ ಕಳೆದ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. ಕೆಲ ಕಡೆ ಮದುವೆಯಲ್ಲಿ `ಜೂತಾ ಚುರೈ’ ಎಂಬ ಸಂಪ್ರದಾಯವಿದೆ. ಅಂದರೆ ಮದುಮಗನ ಶೂ ಅಥವಾ ಪಾದರಕ್ಷೆಯನ್ನು ಕದ್ದು ಅಡಗಿಸಿಡುವ ಮೋಜಿನ ಕ್ರಮ ಇದು. ಈ ಕ್ಷಣ ಸಾಕಷ್ಟು ತಮಾಷೆಯಿಂದ ಕೂಡಿರುತ್ತದೆ.

ಇಲ್ಲೂ ಕೂಡಾ ಅದೇ ಆಗಿರೋದು. ರಿಯಾ ನಾಡಕರ್ಣಿ ಮತ್ತು ಮಾಹೀರ್ ಮೆಹ್ತಾ ವಿವಾಹದಲ್ಲಿ ತನ್ನ ಫ್ರೆಂಡ್ ಶೂ ಅನ್ನು ಕಾಪಾಡಲು ಆರ್ಯನ್ ಖಾನ್ ಹೋರಾಟ ನಡೆಸಬೇಕಾಗಿತ್ತು.


ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆರ್ಯನ್ ಖಾನ್ ವರನ ಶೂ ಅನ್ನು ಬಿಗಿಯಾಗಿ ಹಿಡಿದಿರುವುದು ಕಂಡುಬರುತ್ತದೆ. ಸಂಪ್ರದಾಯದ ಪ್ರಕಾರ, ವಧುವಿನ ಕಡೆಯ ಸದಸ್ಯರು ಅದನ್ನು ಕದಿಯಲು ಪ್ರಯತ್ನಿಸುತ್ತಾರೆ, ಆದರೆ ಆರ್ಯನ್ ಬಿಟ್ಟುಕೊಡಲು ನಿರಾಕರಿಸುತ್ತಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Show More

Related Articles

Leave a Reply

Your email address will not be published. Required fields are marked *

Back to top button