Bollywood

ಸಲ್ಮಾನ್ ಖಾನ್-ನಯನತಾರಾ ಜೋಡಿಯ ಸಿನಿಮಾ ರಿಲೀಸ್‌ಗೆ ಮುಹೂರ್ತ ಫಿಕ್ಸ್

ಸಲ್ಮಾನ್ ಖಾನ್ ಹಾಗೂ ನಯನತಾರಾ ಅಭಿನಯದ ಬಹುನಿರೀಕ್ಷಿತ ಸಿನಿಮಾದ ಚಿತ್ರೀಕರಣ ಆರಂಭಗೊಂಡಿದೆ. ಸದ್ಯ ಈ ಚಿತ್ರದ ಬಿಡುಗಡೆಗೂ ಮುಹೂರ್ತ ಫಿಕ್ಸ್ ಆಗಿದೆ. ಈ ಸಿನಿಮಾವನ್ನು 2027ರ ಈದ್‌ಗೆ ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ.

ಈ ಸಂಗತಿಯನ್ನು ಸಲ್ಮಾನ್ ಖಾನ್ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಸಲ್ಲು ಚಿತ್ರೀಕರಣದ ದಿನದ ಸಣ್ಣ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.


ಪ್ರಸ್ತುತ ಚಿತ್ರತಂಡ ಮುಂಬೈನಲ್ಲಿ ಒಂದು ತಿಂಗಳ ಅವಧಿಯ ಚಿತ್ರೀಕರಣದಲ್ಲಿ ನಿರತವಾಗಿದೆ. ಇಲ್ಲಿ ಪ್ರಮುಖ ದೃಶ್ಯಗಳು ಮತ್ತು ಹೈ-ಆಕ್ಟೇನ್ ಆಕ್ಷನ್ ಬ್ಲಾಕ್‌ಗಳನ್ನು ಚಿತ್ರೀಕರಿಸಲಾಗುತ್ತದೆ. ಇದೇ ಮೊದಲಬಾರಿಗೆ ಸಲ್ಮಾನ್ ಖಾನ್ ಜೊತೆಗೆ ನಯನತಾರಾ ನಟಿಸುತ್ತಿದ್ದಾರೆ. 3 ವರ್ಷಗಳ ಹಿಂದೆ ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದ ಮೂಲಕ ನಯನತಾರಾ ಬಾಲಿವುಡ್‌ಗೆ ಕಾಲಿಟ್ಟಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button