Sandalwood

ಮೋಹನ್ ಲಾಲ್ ಬಾಯಲ್ಲಿ ಕನ್ನಡದ ಸೂಪರ್ ಹಿಟ್ ಹಾಡು : ಅಮೇರಿಕಾದಲ್ಲಿ ಅಣ್ಣಾವ್ರ ಹಾಡು ಹಾಡಿದ ಮಲಯಾಳಂ ಸೂಪರ್‌ಸ್ಟಾರ್

ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಕನ್ನಡದ ಸೂಪರ್ ಹಿಟ್ ಹಾಡನ್ನು ಹಾಡಿ ಗಮನ ಸೆಳೆದಿದ್ದಾರೆ. ಅಮೇರಿಕಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೋಹನ್ ಲಾಲ್ ಅವರು ವರನಟ ಡಾ.ರಾಜ್‍ಕುಮಾರ್ ಹಾಗೂ ಮಂಜುಳಾ ಅಭಿನಯದ `ಎರಡು ಕನಸು’ ಚಿತ್ರದ `ಎಂದೆಂದಿಗೂ ನಿನ್ನನ್ನು ಮರೆತು ಬದುಕಿರಲಾರೆ’ ಹಾಡನ್ನು ಹಾಡಿದ್ದಾರೆ.

ಮೋಹನ್ ಲಾಲ್ ಅವರು ಆನಂದಿಸುತ್ತಾ ಅದ್ಭುತವಾಗಿ ಹಾಡುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ವರನಟ ಡಾ.ರಾಜ್‍ಕುಮಾರ್ ಅವರ ಅಭಿಮಾನಿಯಾಗಿರುವ ಮೋಹನ್ ಲಾಲ್ ಅವರು ಈ ಹಿಂದೆಯೂ ಇದೇ ಹಾಡನ್ನು ನೋಡುತ್ತಾ ಆನಂದಿಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು.

1974ರಲ್ಲಿ ‘ಎರಡು ಕನಸು’ ಸಿನಿಮಾ ಬಿಡುಗಡೆಯಾಗಿತ್ತು. ರಾಜನ್-ನಾಗೇಂದ್ರ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು. ಎಂದೆಂದೂ ನಿನ್ನನು ಮರೆತು ಹಾಡನ್ನು ಪಿ.ಬಿ. ಶ್ರೀನಿವಾಸ್ ಮತ್ತು ವಾಣಿ ಜಯರಾಮ್ ಅವರು ಹಾಡಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button