ತಲಪಾಡಿಯಲ್ಲಿ ಕಾರಿನಲ್ಲಿ ಡಿವೈಡರ್ ಮೇಲೆ ಅಪಾಯಕಾರಿ ಸ್ಟಂಟ್ : ಪ್ರಕರಣ ದಾಖಲು
ಬಿ.ಸಿ.ರೋಡ್ : ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದ ತಲಪಾಡಿ ಎಂಬಲ್ಲಿ ಕಾರಿನಲ್ಲಿ ಡಿವೈಡರ್ ಮೇಲೆ ಅಪಾಯಕಾರಿ ವ್ಹೀಲಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದೆ.
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಲ್ 09-ಆರ್ 6971 ನಂಬರಿನ ಕಾರಿನಲ್ಲಿದ್ದ ಚಾಲಕ ಈ ಸ್ಟಂಟ್ ಪ್ರದರ್ಶಿಸಿದ್ದಾನೆ. ಈ ಸಂಬಂಧ ಕಾರಿನ ಚಾಲಕ ಸರ್ಫುದ್ದೀನ್ ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈ ವಿಡಿಯೋವನ್ನು ದಕ್ಷಿಣ ಕನ್ನಡ ಪೊಲೀಸ್ ವಿಭಾಗದ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ. `ರಸ್ತೆ ಇರುವುದು ಸಂಚಾರಕ್ಕೆ, ವ್ಹೀಲಿಂಗ್ ಮಾಡುವ ಸಾಹಸಕ್ಕಲ್ಲ.. ಸಾಹಸಕ್ಕಿಂತ ಸುರಕ್ಷತೆ ಮುಖ್ಯ, ವೇಗಕ್ಕಿಂತ ವಿವೇಕ ಮುಖ್ಯ… ಸ್ಟಂಟ್ ಬಿಡಿ, ಸುರಕ್ಷಿತವಾಗಿ ಮನೆ ಸೇರಿ’ ಎಂದೂ ಈ ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ.
“”ರಸ್ತೆ ಇರುವುದು ಸಂಚಾರಕ್ಕೆ, ವೀಲಿಂಗ್ ಮಾಡುವ ಸಾಹಸಕ್ಕಲ್ಲ..
ಸಾಹಸಕ್ಕಿಂತ ಸುರಕ್ಷತೆ ಮುಖ್ಯ, ವೇಗಕ್ಕಿಂತ ವಿವೇಕ ಮುಖ್ಯ…
ಸ್ಟಂಟ್ ಬಿಡಿ, ಸುರಕ್ಷಿತವಾಗಿ ಮನೆ ಸೇರಿ””….
@KarnatakaCops #safedriving#DontDoStunts#speedkills pic.twitter.com/4DANXkPC9P— Dakshina Kannada District Police (@spdkpolice) April 25, 2026
ಈ ವಿಡಿಯೋವನ್ನು ಹಂಚಿಕೊಂಡಿರುವ ಪೊಲೀಸರು `ರಸ್ತೆ ಇರುವುದು ಸಂಚಾರಕ್ಕೆ, ಸ್ಟಂಟ್ ಪ್ರದರ್ಶಿಸಲು ಅಲ್ಲ, ನಿಮ್ಮ ಸವಾರಿಯನ್ನು ಅಪಾಯಕಾರಿಯನ್ನಾಗಿ ಪರಿವರ್ತಿಸಬೇಡಿ’ ಎಂಬ ಸಂದೇಶವನ್ನೂ ನೀಡಿದ್ದಾರೆ.



