2026 ಯೆಜ್ಡಿ ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್ ಬಿಡುಗಡೆ : ಬೆಲೆ ಎಷ್ಟು ಗೊತ್ತಾ…?
ಕ್ಲಾಸಿಕ್ ಲೆಜೆಂಡ್ಸ್ ಹೊಸ 2026 ಯೆಜ್ಡಿ ಸ್ಕ್ರ್ಯಾಂಬ್ಲರ್ ಬೈಕ್ ಅನ್ನು ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಬೈಕಿನ ಎಕ್ಸ್ ಶೋರೂಮ್ ಬೆಲೆ 2 ಲಕ್ಷ ರೂಪಾಯಿಯಿಂದ 2.09 ಲಕ್ಷ ರೂಪಾಯಿ ತನಕ ಇದೆ. ಈ ನವೀಕರಿಸಿದ ಮಾದರಿಯು ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.
ಈ ಬೈಕ್ 334 ಸಿಸಿ, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್‍ನಿಂದ ಶಕ್ತಿ ಪಡೆಯುತ್ತದೆ. ಇದು 29.5 ಬಿಹೆಚ್‍ಪಿ ಶಕ್ತಿ ಮತ್ತು 30 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಹೊರಹಾಕುತ್ತದೆ. ಇದು ರೋಡ್, ಆಫ್-ರೋಡ್ ಮತ್ತು ರೈನ್ ಹೀಗೆ ಮೂರು ರೈಡ್ ಮೋಡ್‍ಗಳನ್ನೂ ಹೊಂದಿದೆ. ಈ ಬೈಕ್‍ನ ಒಟ್ಟು ತೂಕವನ್ನು 182 ಕೆಜಿಯಿಂದ 174 ಕೆಜಿಗೆ ಇಳಿಸಲಾಗಿದೆ.
Rest Less.
Diss Obedience.
Two ways to ride.
One unforgettable night.@anandmahindra #YezdiScrambler2026 #BSAScrambler650 #OGScramblers #Scrambler pic.twitter.com/zzwDjtpP4C— yezdiforever (@yezdiforever) April 24, 2026
ಈ ಅಪ್‍ಡೇಟೆಡ್ ಮಾದರಿಯು ತನ್ನ ವಿನ್ಯಾಸ, ವೈಶಿಷ್ಟ್ಯಗಳು ಹಾಗೂ ಹಾರ್ಡ್‍ವೇರ್‍ನಲ್ಲಿ ಸಾಕಷ್ಟು ಪರಿಷ್ಕರಣೆ ಕಂಡಿದೆ. ಜೊತೆಗೆ ಪುನರ್ನಿರ್ಮಾಣ ಮಾಡಿದ ಚಾಸಿಸ್‍ನೊಂದಿಗೆ ಈ ಬೈಕ್ ಬರುತ್ತಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಇದು ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ಮತ್ತು ರಾಯಲ್ ಎನ್‍ಫೀಲ್ಡ್ ಸ್ಕ್ರ್ಯಾಮ್ 440 ನಂತಹ ಬೈಕಿನೊಂದಿಗೆ ಸ್ಪರ್ಧಿಸುವುದನ್ನು ಮುಂದುವರಿಸಲಿದೆ.



