Bollywood

Sridevi’s Chennai property : ಶ್ರೀದೇವಿಯ ಆಸ್ತಿ ಕೇಸ್ ಗೆದ್ದ ಪತಿ ಬೋನಿ ಕಪೂರ್ ಮತ್ತು ಮಕ್ಕಳು : ಏನಿದು ಪ್ರಕರಣ?

ಬಾಲಿವುಡ್ ನಟಿ, ದಿವಂಗತ ಶ್ರೀದೇವಿ ಅವರು ಖರೀದಿಸಿದ್ದ ಆಸ್ತಿಗೆ ಸಂಬಂಧಿಸಿದಂತೆ ಉಂಟಾಗಿದ್ದ ವ್ಯಾಜ್ಯ ಈಗ ಇತ್ಯರ್ಥವಾಗಿದ್ದು, ಪತಿ ಬೋನಿ ಕಪೂರ್ ಹಾಗೂ ಮಕ್ಕಳಾದ ಜಾನ್ವಿ ಕಪೂರ್ ಹಾಗೂ ಖುಷಿ ಕಪೂರ್ ಪರ ಮದ್ರಾಸ್ ಹೈಕೋರ್ಟ್ ತೀರ್ಪು ಬಂದಿದೆ. 1988ರಲ್ಲಿ ದಿವಂಗತ ನಟಿ ಶ್ರೀದೇವಿ ಹೆಸರಿನಲ್ಲಿ ಖರೀದಿಸಲಾದ ಚೆನ್ನೈ ಆಸ್ತಿಯ ಕುರಿತು ಸಲ್ಲಿಸಲಾದ ಸಿವಿಲ್ ಮೊಕದ್ದಮೆಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

ಎಂಸಿ ಶಿವಕಾಮಿ, ಎಂಸಿ ನಟರಾಜನ್ ಮತ್ತು ಚಂದ್ರಭಾನು ಎಂಬವರು ಶ್ರೀದೇವಿ ಖರೀದಿಸಿದ್ದ 2.70 ಎಕರೆ ಭೂಮಿ ತಮ್ಮದೆಂದು ದಾವೆ ಹೂಡಿದ್ದರು. ಇವರು 1940ರ ದಾಖಲೆಗಳನ್ನು ಮುಂದಿಟ್ಟುಕೊಂಡು, ಈ ಜಾಗ ತಮಗೆ ಸೇರಬೇಕೆಂದು 2025 ರಲ್ಲಿ ಸಿವಿಲ್ ದಾವೆ ಹೂಡಿದ್ದರು. ಈ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. 40 ವರ್ಷಗಳ ಹಳೆಯ ವ್ಯವಹಾರವನ್ನು ಈಗ ಪ್ರಶ್ನಿಸುವುದು ಕಾಲಮಿತಿಯ ನಿಯಮದ ಉಲ್ಲಂಘನೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Show More

Related Articles

Leave a Reply

Your email address will not be published. Required fields are marked *

Back to top button