Special Desk
ಬೆಳಗ್ಗೆ ಸೂರ್ಯ ದೇವನಿಗೆ ಜಲ ಅರ್ಪಿಸುವುದು ಯಾಕೆ? ಮತ್ತು ಹೇಗೆ?

ಸೂರ್ಯ ಬಲಿಷ್ಠ ಗ್ರಹಗಳಲ್ಲಿ ಒಂದು. ನಮ್ಮಲ್ಲಿ ಸೂರ್ಯನನ್ನು ಪ್ರತ್ಯಕ್ಷ ದೇವರಂತೆ ನೋಡಲಾಗುತ್ತದೆ. ವಿಶ್ವಕ್ಕೆ ಬೆಳಕು, ಶಕ್ತಿಯನ್ನು ನೀಡುವ ದೇವ ಭಗವಾನ್ ಭಾಸ್ಕರ. ಇದೇ ಕಾರಣಕ್ಕೆ ನಮ್ಮಲ್ಲಿ ಸೂರ್ಯನಿಗೆ ಅರ್ಘ್ಯ ಅರ್ಪಿಸುವುದಕ್ಕೆ ಸಾಕಷ್ಟು ಮಹತ್ವವಿದೆ. ಅಂತೆಯೇ ಬೆಳಗ್ಗೆ ಸೂರ್ಯ ದೇವನಿಗೆ ನೀರು ಅರ್ಪಿಸುವುದು ಯಾಕೆ?, ಸೂರ್ಯನಿಗೆ ಅರ್ಘ್ಯ ಅರ್ಪಿಸುವ ಸರಿಯಾದ ವಿಧಾನಗಳ ಬಗೆಗಿನ ಮಾಹಿತಿ ಇಲ್ಲಿದೆ.
- ಸೂರ್ಯ ದೇವರು ಶಕ್ತಿ, ಬೆಳಕಿನ ಅಂತಿಮ ಮೂಲ
- ಹೀಗಾಗಿ ಮುಂಜಾನೆ ಭಾಸ್ಕರನಿಗೆ ಜಲ ಅಥವಾ ನೀರು ಅರ್ಪಿಸುವ ಪದ್ಧತಿ ಅನಾದಿಕಾಲದಿಂದಲೂ ನಮ್ಮಲ್ಲಿ ಇದೆ
- ಇದು ಗೌರವ ಮತ್ತು ಕೃತಜ್ಞತೆಯನ್ನು ಅರ್ಪಿಸುವ ಒಂದು ಮಾರ್ಗವಾಗಿದೆ
- ಪುರಾಣಗಳಲ್ಲಿ ಸೂರ್ಯದೇವನನ್ನು 7 ಕುದುರೆಗಳಿರುವ ರಥವೇರಿ ಬರುವಂತೆ ಚಿತ್ರಿಸಲಾಗಿದೆ
- ಈ ಏಳು ಕುದುರೆಗಳು ಮಾನವ ದೇಹದ ಏಳು ಚಕ್ರಗಳು ಮತ್ತು ಅವುಗಳ ಅನುಗುಣವಾದ ಕಾಮನಬಿಲ್ಲಿನ ಬಣ್ಣವನ್ನು ಪ್ರತಿನಿಧಿಸುತ್ತದೆ ಎಂಬ ನಂಬಿಕೆ ಇದೆ
ಇಲ್ಲಿದೆ ಸೂರ್ಯ ದೇವನಿಗೆ ಜಲವನ್ನು ಅರ್ಪಿಸಲು ಸರಿಯಾದ ಮಾರ್ಗ
- ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆಯನ್ನು ಧರಿಸಿ
- ತಾಮ್ರದ ಪಾತ್ರೆಯಲ್ಲಿ (ತಾಮ್ರದ ಚೊಂಬು ಅಥವಾ ಲೋಟ) ನೀರನ್ನು ತುಂಬಿರಿ
- ಸೂರ್ಯನ ಕಡೆಗೆ ಮುಖಮಾಡಿ ನಿಲ್ಲಿ, ನಿಮ್ಮ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ನಿಧಾನವಾಗಿ ಎತ್ತರದಿಂದ ನೀರನ್ನು ಸುರಿಯಿರಿ
- ಈ ವೇಳೆ ಓಂ ಸೂರ್ಯಾಯ ನಮಃ ಮತ್ತು ಓಂ ಘ್ರಣಿ ಸೂರ್ಯಾಯ ನಮಃ ಎಂಬ ಮಂತ್ರವನ್ನು ಪಠಿಸಿ
- ನೀರು ಸುರಿದ ಬಳಿಕ ಆ ನೀರ ಮೇಲೆ ಕಾಲಿಡಬೇಡಿ
- ಸಾಧ್ಯವಾದರೆ ಪ್ರತಿದಿನ ಸೂರ್ಯನಿಗೆ ಜಲ ಅರ್ಪಿಸಿ, ಇಲ್ಲವಾದರೆ ಪ್ರತಿ ಭಾನುವಾರ ಅಘ್ರ್ಯ ಅರ್ಪಿಸಿ
- ಯಾಕೆಂದರೆ ಭಾನುವಾರ ಸೂರ್ಯದೇವನಿಗೆ ಮೀಸಲಾದ ದಿನವಾಗಿದೆ
ಆಧ್ಯಾತ್ಮಿಕ ಪ್ರಯೋಜನಗಳು
- ಸೂರ್ಯ ದೇವರಿಗೆ ನೀರನ್ನು ಅರ್ಪಿಸುವುದರಿಂದ ಕೆಲವು ಆಧ್ಯಾತ್ಮಿಕ ಪ್ರಯೋಜನಗಳೂ ಇವೆ
- ಉದಯಿಸುತ್ತಿರುವ ಸೂರ್ಯನಿಗೆ ಜಲ ಅರ್ಪಿಸಲು ನೀವು ಬೆಳಿಗ್ಗೆ ಬೇಗನೆ ಎಚ್ಚರಗೊಳ್ಳಬೇಕು, ಇದು ಸರಿಯಾದ ದಿನಚರಿಯನ್ನು ರೂಪಿಸಲು ಸಹಾಯಕ
- ಸೂರ್ಯನ ಆರಂಭಿಕ ಕಿರಣಗಳಲ್ಲಿ ಕಳೆಯುವುದಕ್ಕೆ ಇದೊಂದು ಉತ್ತಮ ಅವಕಾಶವಾಗಿದೆ



