ಅಕ್ಷಯ್ ಅಭಿನಯದ `ವೆಲ್ಕಮ್ ಟು ದಿ ಜಂಗಲ್’ನ ಫಸ್ಟ್ ಲುಕ್ ರಿಲೀಸ್
ವೆಲ್ಕಮ್ ಸರಣಿಯ ಮೂರನೇ ಭಾಗವಾದ `ವೆಲ್ಕಮ್ ಟು ದಿ ಜಂಗಲ್’ನ ಅಕ್ಷಯ್ ಕುಮಾರ್ ಅವರ ಲುಕ್ ಬಹಿರಂಗವಾಗಿದೆ. ಈ ಚಿತ್ರದ ಮೊದಲ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಪೋಸ್ಟರ್‌ನಲ್ಲಿ ಅಕ್ಷಯ್ ನೇವಿ-ಬ್ಲೂ ವೆಲ್ವೆಟ್ ಸೂಟ್ ಧರಿಸಿ ಕಾಡಿನೊಳಗೆ ರೆಡ್-ಕಾರ್ಪೆಟ್ ಪ್ರವೇಶ ಪಡೆಯುತ್ತಿರುವಂತೆ ಕಾಣಿಸಿಕೊಂಡಿದ್ದಾರೆ.
ಅಹ್ಮದ್ ಖಾನ್ ನಿರ್ದೇಶನದ ಹಾಸ್ಯ ಪ್ರಧಾನ ಚಿತ್ರ ಇದಾಗಿದೆ. ಈ ಸಿನಿಮಾದಲ್ಲಿ ಸುನೀಲ್ ಶೆಟ್ಟಿ, ಜಾಕಿ ಶ್ರಾಫ್, ರವೀನಾ ಟಂಡನ್, ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಅರ್ಷದ್ ವಾರ್ಸಿ ಸೇರಿದಂತೆ ಅನೇಕ ಕಲಾವಿದರು ನಟಿಸಿದಾರೆ.
ವೆಲ್‌ಕಮ್ ಟು ದಿ ಜಂಗಲ್ ಅನ್ನು ಮುಂಬೈ ಮತ್ತು ಕಾಶ್ಮೀರ ಸೇರಿ ಭಾರತದ ವಿವಿಧ ಭಾಗ ಹಾಗೂ ವಿದೇಶದಲ್ಲೂ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಇದೇ ವರ್ಷದ ಜೂನ್ 26 ರಂದು ಚಿತ್ರ ಬಿಡುಗಡೆಯಾಗಲಿದೆ. ವೆಲ್‌ಕಮ್ (2007), ವೆಲ್‌ಕಮ್ ಬ್ಯಾಕ್ (2015) ಚಿತ್ರವನ್ನು ಅನೀಸ್ ಬಾಜ್ಮಿ ನಿರ್ದೇಶಿಸಿದ್ದರು.
ಅಕ್ಷಯ್ ಕುಮಾರ್, ವೆಲ್‌ಕಮ್ ಚಿತ್ರಸರಣಿ, ಫಸ್ಟ್ ಲುಕ್ ರಿಲೀಸ್



