Bollywood

ಕೊಲೆ, ಪರೋಲ್, ಬಾಲಿವುಡ್‍ನಲ್ಲಿ ನಟನೆ! : 12 ವರ್ಷಗಳ ಬಳಿಕ ಸಿಕ್ಕಿಬಿದ್ದ ನಟ!

ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಪೆರೋಲ್‍ನಲ್ಲಿ ಹೊರಬಂದ ಆರೋಪಿಯೊಬ್ಬ ಮತ್ತೆ ಜೈಲಿಗೆ ಮರಳದೆ ಬಾಲಿವುಡ್‍ನಲ್ಲಿ ವೃತ್ತಿಜೀವನ ಕಂಡುಕೊಂಡಿದ್ದ ಕಥೆ ಇದು. ಇದೀಗ ಈ ನಟ 12 ವರ್ಷಗಳ ಬಳಿಕ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. ಇದು ಗುಜರಾತ್ ನಟ ಹೇಮಂತ್ ವೈಷ್ಣವ್‍ನ ಕಥೆ.

ಪೆÇಲೀಸರ ಪ್ರಕಾರ 2005ರಲ್ಲಿ ಅಹಮದಾಬಾದ್‍ನ ನರೋಡಾ ಪ್ರದೇಶದಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಮಂತ್ ವೈಷ್ಣವ್ ದೋಷಿ ಎಂದು ಸಾಬೀತಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಈಗ ಪೆರೋಲ್‍ನಲ್ಲಿ ಹೊರ ಬಂದು ಮತ್ತೆ ಜೈಲಿಗೆ ಹಿಂದಿರುಗದೆ ಓಡಿ ಹೋಗಿದ್ದ. ಹೀಗೆ ಪರಾರಿಯಾಗಿದ್ದ 53 ವರ್ಷದ ನಟನನ್ನು ಅಹಮದಾಬಾದ್ ಅಪರಾಧ ವಿಭಾಗ ಅಹಮದಾಬಾದ್‍ನ ಘೀಕಾಂತ ಮೆಟ್ರೋ ನಿಲ್ದಾಣದ ಬಳಿ ಬಂಧಿಸಿದೆ.

ಕೊಲೆ ಪ್ರಕರಣದಲ್ಲಿ ಆಗಸ್ಟ್ 27, 2008 ರಂದು ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇದಾದ ಬಳಿಕ ಗುಜರಾತ್ ಹೈಕೋರ್ಟ್ ಈತನಿಗೆ 30 ದಿನಗಳ ಪೆರೋಲ್ ಮಂಜೂರು ಮಾಡಿತ್ತು. ಈ ಪೆರೋಲ್ ಅವಧಿ ಮುಗಿದ ಬಳಿಕ ಶರಣಾಗದ ಈತ 2014 ರಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜೊತೆಗೆ ಬಂಧನದಿಂದ ತಪ್ಪಿಸಿಕೊಂಡಿದ್ದರೂ ಹೇಮಂತ್ ವೈಷ್ಣವ್ ನಟನಾಗಿ ಮುಂದುವರಿದಿದ್ದ. ಪೊಲೀಸರು ಹೇಳುವಂತೆ ಈತ ಅಮಿತಾಬ್ ಬಚ್ಚನ್ ಮತ್ತು ಆಮಿರ್ ಖಾನ್ ಅವರೊಂದಿಗೆ `ಥಗ್ಸ್ ಆಫ್ ಹಿಂದೂಸ್ತಾನ್’, ರಣವೀರ್ ಸಿಂಗ್ ಅವರ `ಜಯೇಶ್‍ಭಾಯ್ ಜೋರ್ದಾರ್’, `ವಾಗ್ಲೆ ಕಿ ದುನಿಯಾ’ ನಂತಹ ದೂರದರ್ಶನ ಕಾರ್ಯಕ್ರಮಗಳು ಮತ್ತು ರಂಗಭೂಮಿ ನಿರ್ಮಾಣಗಳಲ್ಲಿ ನಟಿಸಿದ್ದಾನೆ. ಜೊತೆಗೆ ಲಾಹೋರ್ 1947 ಮತ್ತು ಮಲಯಾಳಂ ಚಲನಚಿತ್ರ ಐ2: ಎಂಪುರಾನ್ ಸೇರಿದಂತೆ ಕೆಲವು ಚಿತ್ರಗಳಲ್ಲಿ ಈತ ಕಾಣಿಸಿಕೊಂಡಿದ್ದ.

Show More

Related Articles

Leave a Reply

Your email address will not be published. Required fields are marked *

Back to top button