‘ಡಾನ್ 3’ ಸಿನಿಮಾದಿಂದ ಹೊರಬಂದ ರಣವೀರ್ ಸಿಂಗ್: ಕಾರ್ಮಿಕ ಒಕ್ಕೂಟ ಗರಂ
ಫರ್ಹಾನ್ ಅಖ್ತರ್ ಹಾಗೂ ರಿತೇಶ್ ಸಿಧ್ವಾನಿ ನಿರ್ಮಾಣದ `ಡಾನ್ 3′ ಸಿನಿಮಾದಿಂದ ಕಡೆಯ ಕ್ಷಣದಲ್ಲಿ ರಣವೀರ್ ಸಿಂಗ್ ಹಿಂದೆ ಸರಿದದ್ದು ಈಗ ವಿವಾದಕ್ಕೆ ಕಾರಣವಾಗಿದೆ. ರಣವೀರ್ ನಿರ್ಧಾರದಿಂದ ಪ್ರಮುಖ ಕಾರ್ಮಿಕ ಒಕ್ಕೂಟ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ – ಎಫ್‍ಡಬ್ಲೂಐಸಿಇ ಇವರ ವಿರುದ್ಧ ಅಸಹಕಾರ ನಿಲುವು ತೆಗೆದುಕೊಂಡಿದೆ.
ಈ ಚಿತ್ರದ ಎಲ್ಲಾ ಸಿದ್ಧತೆಗಳು ನಡೆದಿದ್ದರೂ, ಚಿತ್ರೀಕರಣ ಆರಂಭದ ಹಂತದಲ್ಲೇ ರಣವೀರ್ ಸಿಂಗ್ ಸಿನಿಮಾ ತೊರೆದಿದ್ದಾರೆ ಎನ್ನಲಾಗಿದೆ. ಇದರಿಂದ ನಿರ್ಮಾಣ ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಹೀಗಾಗಿ ಚಿತ್ರರಂಗದ ಸದಸ್ಯರು ಅವರೊಂದಿಗೆ ಕೆಲಸ ಮಾಡುವ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಒಕ್ಕೂಟ ಸೂಚನೆ ನೀಡಿದೆ.
ಫರ್ಹಾನ್ ಅಖ್ತರ್ ಈ ವರ್ಷದ ಏಪ್ರಿಲ್ 11 ರಂದು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ದೇಶಕರ ಸಂಘಕ್ಕೆ ದೂರು ನೀಡಿದ್ದರು. ಆ ಬಳಿಕ ಮುಂದಿನ ಕ್ರಮಕ್ಕೆ ಈ ವಿಷಯವನ್ನು ಎಫ್‍ಡಬ್ಲೂಐಸಿಇಗೆ ವರ್ಗಾಯಿಸಲಾಗಿತ್ತು. ಆದರೆ ಹಲವು ನೋಟೀಸ್ ನೀಡಿದ್ದರೂ ರಣವೀರ್ ವಿಚಾರಣೆಗೆ ಹಾಜರಾಗಿರಲಿಲ್ಲ ಎಂದು ದೂರಲಾಗಿದೆ.



